ಬೆಂಗಳೂರು: ಕಾವೇರಿ ಆರತಿಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಅಣೆಕಟ್ಟು, ಪರಿಸರ, ನದಿಗೆ ಆಗುತ್ತಿರುವ ಅಪಾಯದ ಬಗ್ಗೆ ಹೈಕೋರ್ಟ್ ಗೆ ರೈತ ಸಂಘ ಮನವರಿಕೆ ಮಾಡಿ ಕೊಟ್ಟಿತ್ತು.
ರೈತ ಸಂಘದ ಸುನಂದ ಜಯರಾಮ್ ಈ ಕುರಿತು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.
ರೈತ ಸಂಘದ ಪರವಾಗಿ ವಕೀಲರಾದ ಎಂ ಶಿವಪ್ರಕಾಶ್ ವಾದಿಸಿದರು. ವಕೀಲರಾದ ಶಶಾಂಕ್ ಕೆ ಸಿ, ರಘು ಜೊತೆಗಿದ್ದರು.ಯೋಜನೆಯನ್ನು ಜಾರಿಗೊಳಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಡ್ಯ ರೈತರ ವಿರೋಧದ ನಡುವೆ ಪ್ರಯತ್ನಿಸಿದ್ದರು.ರೈತರು ಸಹ ಯೋಜನೆಯ ವಿರುದ್ದ ತೀವ್ರ ಹೋರಾಟಕ್ಕೆ ಇಳಿದು ನ್ಯಾಯಾಂಗದ ಹೋರಾಟಕ್ಕು ಪ್ರಯತ್ನಿಸಿದ ಫಲವಾಗಿ ಹೈಕೋರ್ಟ್ ಈ ಆದೇಶ ಮಾಡಿದೆ.