ಖಾತೆಗೆ ನಿರಾಕರಣೆ:ಗೋಪಾಲಪುರ ಗ್ರಾಮಸ್ಥರ ಅಸಮಾಧಾನ
ಮಂಡ್ಯ: ಜು.೯.ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿಗಳ ಖಾತೆ ನೋಂದಣಿಗೆ ಅವಕಾಶ ನೀಡದ ಸರ್ಕಾರದ ಕ್ರಮದ ವಿರುದ್ದ ಮಂಡ್ಯ ತಾಲೋಕಿನ ಗೋಪಾಲಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಇಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಕೆ ಆರ್ ಕೆಂಪಾಚಾರಿ ಗೋಪಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಪುತ್ರರೊಬ್ಬರು ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದಾರೆಂದು ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾತೆಗಳನ್ನು ನೋಂದಣಿ ಮಾಡದಂತೆ ತಡೆ ಒಡ್ಡಲಾಗಿದೆ.
ಈ ಕುರಿತು ಸ್ಥಳೀಯ ಶಾಸಕರಾದ ರವಿಕುಮಾರ್ ರವರು ದಿಶಾ ಸಭೆಯಲ್ಲಿ ಅಕ್ರಮ ಬಡಾವಣೆ ಕುರಿತು ಪ್ರಸ್ತಾಪ ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ.ಬಡಾವಣೆ ನಿರ್ಮಾಣದ ವಿಚಾರದಲ್ಲಿ ಶಾಸಕರು ರಾಜಕಾರಣ ಬಿಟ್ಟು ಕಾನೂನಿನ್ವಯ ನಡೆದುಕೊಳ್ಳಬೇಕು ಜನಪ್ರತಿನಿಧಿಯಾಗಿ ವಾಸ್ತವವನ್ನು ತೆರದಿಡಬೇಕೆ ವಿನಾ ಅಪಪ್ರಚಾರ ಮಾಡಬಾರದು.ಖಾತೆ ನೋಂದಣಿ ಹಾಗೂ ಬದಲಾವಣೆಗೆ ಯಾವುದೆ ಅಡೆತಡೆ ಮಾಡದಂತೆ ಅವರು ಮನವಿ ಮಾಡಿದರು.
ಗೋಪಾಲಪುರ ಗ್ರಾಪಂ ವ್ಯಾಪ್ತಿಯಲ್ಲಿ ವಜ್ರ ಇನ್ ಫ್ರಾಸ್ಟಕ್ಚರ್ ಪ್ರೈ ಲಿಮಿಟೆಡ್ ನವರು ಖಾಸಗಿ ಬಡಾವಣೆ ನಿರ್ಮಿಸಲು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ.ಈ ಬಡಾವಣೆ ನಿಯಮಾನುಸಾರ ರಚನೆಯಾಗಿಲ್ಲ ಎಂಬುದು ಮೂಡಾ ಅಧಿಕಾರಿಗಳಿಗೆ ತಿಳಿಯಲಿಲ್ಲವೆ.ಸ್ವತಃ ಕಾಂಗ್ರೆಸ್ ಪಕ್ಷದ ನಯೀಂ ಮೂಡಾ ಅಧ್ಯಕ್ಷರು.ಶಾಸಕರಾದ ರವಿಕುಮಾರ್ ರವರು ಸಹ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ.ಆದಾಗ್ಯೂ ಸಹ ಅಕ್ರಮ ಬಡಾವಣೆಗೆ ಅನುಮತಿ ದೊರಕಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.ಸಾರ್ವಜನಿಕ ಹಳ್ಳವನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಿದ್ದರು ನಗರಾಭಿವೃದ್ಧಿ ಪ್ರಾಧಿಕಾರ ಇದಕ್ಕೆ ಅನುಮತಿ ನೀಡಿದ್ದಾದರೂ ಹೇಗೆ.ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಶಾಸಕರು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಅಕ್ರಮ ಬಡಾವಣೆ ನಿರ್ಮಾಣದ ಸಂಬಂದ ಈಗಾಗಲೇ ಪಿಡಿಓ ಅಮಾನತ್ತಾಗಿದ್ದಾರೆ.ಜಿಪಂ ಇಓ ಈ ಕುರಿತು ಸಾರ್ವಜನಿಕರ ದೂರಿಗೆ ಸ್ಪಂದಿಸಿಲ್ಲ.ಈ ಕುರಿತು ಈಗಾಗಲೇ ಲೋಕಾಯುಕ್ತ ಮತ್ತು ರಾಜ್ಯ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.ಆದಾಗ್ಯೂ ಶಾಸಕರು ಅಕ್ರಮ ಬಡಾವಣೆ ನಿರ್ಮಾಣದ ಪರ ವಕಾಲತ್ತು ವಹಿಸಿ ಗ್ರಾಮಸ್ಥರ ಪರಾಂಪರಾಗತ ಖಾತೆಗೆಳ ನೋಂದಣಿಗೆ ಅಡ್ಡಿಯಾಗಿದ್ದಾರೆ.ಶಾಸಕರು ಈ ಕುರಿತು ತನಿಖೆಗೆ ಒತ್ತಾಯಿಸಬೇಕೆ ವಿನಾ ಜ್ಯಾದಳದ ಸದಸ್ಯರು ಆಡಳಿತದಲ್ಲಿರುವ ಪಂಚಾಯಿತಿ ಎಂದು ಸಾರ್ವಜನಿಕರಿಗೆ ಕಿರುಕುಳ ನೀಡಬಾರದು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ.ಗ್ರಾಪಂ ಅಧ್ಯಕ್ಷೆ ಸವಿತಾ.ಎಂ.ಬಿ.ಪ್ರಕಾಶ್.ಭಾನು ಪ್ರಕಾಶ್.ಸಿದ್ದರಾಜು ಜೆಡಿಎಸ್ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಎಸ್ ಡಿ ಜಯರಾಂ ಇದ್ದರು.


