ಟ್ರ್ಯಾಕ್ಟರ್‌ನಲ್ಲಿ ಕಬ್ಬು ಸಾಗಾಣಿಕೆಗೆ ಲಾರಿ ಮಾಲೀಕರ ವಿರೋಧ
ಮಂಡ್ಯ: ಲಾರಿ ಮಾಲೀಕರ ಅಸೋಸಿಯೇಷನ್ ಸಭೆಯು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಭೆ ನಡೆಸಿ, ಸಮಸ್ಯೆ ಆಲಿಸಿದರು.
ನಂತರ ಮಾತನಾಡಿದ ಲಾರಿ ಮಾಲೀಕರ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಲಾರಿ ಮಾಲೀಕರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ರೈತರ ಹಿತದೃಷ್ಟಿಯಿಂದ ನಾವು ತೊಂದರೆ ಕೊಡಲು ಇಷ್ಟ ಪಡುವುದಿಲ್ಲ, ಟ್ರ್ಯಾಕ್ಟರ್‌ನಲ್ಲಿ ಕಟಾವು ಮಾಡಿದ ಕಬ್ಬನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ನಮ್ಮ ಲಾರಿಗಳಿಗೆ ನಷ್ಟವಾಗುತ್ತಿದೆ ಇದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿ ಸ್ವಂತ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಕಬ್ಬನ್ನು ಕಾರ್ಖಾನೆಗೆ ಹೋದರೆ ಪರವಾಗಿಲ್ಲ, ಆದರೆ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಬೇಕು. ರಸ್ತೆಯಲ್ಲಿ ಇದರಿಂದ ಅಪಾಯವೇ ಹೆಚ್ಚಿದ್ದು, ಅದಕ್ಕಿಂತ ಮುಖ್ಯವಾಗಿ ನಮ್ಮ ಲಾರಿ ಮಾಲೀಕರಿಗೆ ತುಂಬಾ ಆರ್ಥಿಕ ನಷ್ಟವಾಗುತ್ತದೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು. ಒಟ್ಟಿನಲ್ಲಿ ಲಾರಿಗಳ ಮಾಲೀಕರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಕರ್ನಾಟಕ ಲಾರಿ ಮಾಲೀಕರ ಸಂಘದ ವೇಣುಗೋಪಾಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಸಮಾಕ್ಷಮದಲ್ಲಿ ಸಭೆ ನಡೆಸಲಾಗಿದೆ. ಲಾರಿ ಸಾಗಾಣಿಕೆ ವೆಚ್ಚವನ್ನು ಹೆಚ್ಚಿಸಬೇಕು. ಮುಖ್ಯವಾಗಿ ಟ್ರ್ಯಾಕ್ಟರ್‌ಗಳ ಎಂಜಿನ್‌ಗಳಿಗೆ ಎರಡು ಅಥವಾ ಮೂರು ಟ್ರೈಲರ್‌ಗಳನ್ನು ಹಾಕಿಕೊಂಡು ಕಬ್ಬು ತುಂಬಿಕೊಂಡು ಹೋಗುವುದನ್ನು ನಿಲ್ಲಿಸಬೇಕು. ಸಾರಿಗೆ ಅಧಿಕಾರಿಗಳು ಟ್ರ್ಯಾಕ್ಟರ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಾರಿ ಮಾಲೀಕರ ಸಂಘದ ಕೋದಂಡರಾಮು, ತಮ್ಮೇಗೌಡ, ಶಿವಕುಮಾರ್, ಅರ್ಜುನ್, ಶ್ರೀನಿವಾಸ್, ವಿಶ್ವನಾಥ್, ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
………..