ಮಾಹಿತಿ ಕೋರಿದವರನ್ನೆ ಮಾಹಿತಿ ಕೇಳಿದ ಮಂಡ್ಯ ಡಿಸಿ ಕಚೇರಿ
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದವರನ್ನೆ ಮಾಹಿತಿ ಕೇಳಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಪೆಚ್ಚು ಬೀಳಿಸಿದೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಾ ಸರಕಾರಿ ಇಲಾಖೆಗಳ ನೌಕರರ ಸಂಘ ಸಂಸ್ಥೆಗಳಿಗೆ ಭೂ ಮಂಜೂರಾತಿ ಮಾಡಲಾಗಿದೆ.ಸಂಘದ ಚಟುವಟಿಕೆಗಳಿಗಾಗಿ ನಿವೇಶನ ಮಂಜೂರಾತಿ ಮಾಡಲಾಗಿದೆ.ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಪೂರ್ವ ಭಾಗದಲ್ಲಿ ಮಂಜೂರಾಗಿರುವ ಭೂಮಿಗಿಂತ ಹೆಚ್ಚಿನ ಅಳತೆಗೆ ಕಟ್ಟಡಗಳನ್ನು ನಿರ್ಮಿಸುವುದು ರಸ್ತೆ ಅತಿಕ್ರಮಿಸುವುದು ಇಲ್ಲಿ ನಡೆದೆಯಿದೆ.ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಮ ಮಂಜೂರಾದ ಭೂಮಿಯ ವಿಸ್ತಾರ ಹಾಗೂ ಉದ್ದೇಶದ ಷರತ್ತು ನಿಯಮಗಳ ಪ್ರತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ್ದಾರೆ.
ಆದರೆ ಮಾಹಿತಿ ನೀಡಬೇಕಾದ ಜಿಲ್ಲಾಧಿಕಾರಿ ಕಚೇರಿ ನೀಡಿರುವ ಉತ್ತರ ಎಲ್ಲರನ್ನು ಪೆಚ್ಚು ಬೀಳಿಸುವಂತಿದೆ.
ಯಾವ ಸಾಲಿನಲ್ಲಿ. ಯಾವ ಸಂಘಕ್ಕೆ ಮಂಜೂರು ಮಾಡಲಾಗಿದೆ .ಕಡತದ ಸಂಖ್ಯೆ ಕೊಟ್ಟರೆ ಮಾಹಿತಿ ಒದಗಿಸುವುದಾಗಿ ಹಿಂಬರಹ ನೀಡಲಾಗಿದೆ.
ಯಾವ ಸಾಲಿನಲ್ಲಿ ಯಾವ ಸಂಘ ಸಂಘಟನೆಗೆ ಮಂಜೂರು ಮಾಡಲಾಗಿದೆ ಎಂಬ ದಾಖಲೆ ಇಟ್ಟುಕೊಳ್ಳಲು ರಕ್ಷಣಾ ವೇದಿಕೆಯೆನು ತಾಲೋಕು ಕಚೇರಿಯೆ ಎಂಬ ಪ್ರಾಥಮಿಕ ತಿಳುವಳಿಕೆ ಇಲ್ಲದಂತೆ ಹಿಂಬರಹ ನೀಡಲಾಗಿದೆ.ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಇದ್ದಾರೆ.ಅವರು ಈ ಎಲ್ಲ ಮಾಹಿತಿಯನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ಒದಗಿಸಬೇಕು.ಅದರ ಬದಲು ಮಾಹಿತಿ ಕೋರಿದವರನ್ನೆ ಮಾಹಿತಿ ಕೇಳಿ ಜಿಲ್ಲಾಧಿಕಾರಿ ಕಚೇರಿ ನಗೆಪಾಟಲಿಗೀಡಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸುತ್ತಲೂ ನಗರಸಭೆಯ ಅನುಮೋದಿತ ನಕ್ಷೇ ಉಲ್ಲಂಘನೆ ಹಾಗೂ ಸೆಟ್ ಬ್ಯಾಕ್ ಬಿಡದೆ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಕಡಿವಾಣ ಹಾಕದೆ ಮಾಹಿತಿ ಕೋರಿದವರನ್ನೆ ದಿಕ್ಕು ತಪ್ಪಿಸಲು ಹೊರಟ ಜಿಲ್ಲಾಧಿಕಾರಿ ಕಚೇರಿಯ ಹತಾಶ ಮನೋಭಾವನೆ ನಿಜಕ್ಕು ಖೇದಕರವಾಗಿದೆ ಎಂದು ಎಚ್ ಡಿ ಜಯರಾಂ ತಮ್ಮ ಪ್ರತಿಕ್ರಿಯೆ ತೋರಿದ್ದಾರೆ.ಕೂಡಲೆ ಜಿಲ್ಲಾಧಿಕಾರಿ ಕಚೇರಿ ಸುತ್ತಲಿನ ಅಕ್ರಮ ನಿರ್ಮಾಣಕ್ಕೆ ತಡೆಯೊಡ್ಡದಿದ್ದರೆ ಸರಕಾರಿ ಕಚೇರಿಗೆ ಬರುವ ಸಾರ್ವಜನಿಕರು ರೈತರು ಎಲ್ಲಿ ನಿಲ್ಲಬೇಕು ಎಂದು ಅವರು ಪ್ರಶ್ನಿಸಿದ್ದಾರೆ.


