ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ:ಪ್ರಕರಣ ನ ೦೩ ಕ್ಕೆ ಮುಂದೂಡಿಕೆ
ರಾಜ್ಯದ ಅವಧಿ ಮೀರಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಸಂಬಂದ ಹೈಕೋರ್ಟುನಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣದ ವಿಚಾರಣೆ ನವೆಂಬರ್ ೩ಕ್ಕೆ ಮುಂದೂಡಿಕೆಯಾಗಿದೆ.ಮಂಡ್ಯ ನಗರಸಭೆ ಸೇರಿದಂತೆ ರಾಜ್ಯದ ೪೦ ಕ್ಕು ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ನಗರಸಭಾ ಸದಸ್ಯರು ಎರಡನೇ ಅವಧಿಯ ಅಧ್ಯಕ್ಷರ ಆಯ್ಕೆ ಸಂಧರ್ಭದಲ್ಲಿ ೧೩ ತಿಂಗಳು ಆಡಳಿತಾಧಿಕಾರಿಯನ್ನು ನೇಮಕಗೊಳಿಸಲಾಗಿತ್ತು.ಈ ಅವಧಿಯನ್ನು ತಮ್ಮ ಆಡಳಿತದ ಅವಧಿಯಾಗಿ ಪರಿಗಣಿಸಬಾರದು.ಬದಲಿಗೆ ಮುಂದಿನ ೧೩ ತಿಂಗಳು ಆಡಳಿತ ನಡೆಸಲು ತಮಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಸುನೀಲ್ ಯಾದವ್ ದತ್ ಏಕಸದಸ್ಯ ಪೀಠ ಅವಧಿ ಮೀರದ ಯಾವುದೆ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸದಂತೆ ಆದೇಶ ಮಾಡಿ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿತ್ತು.
ಇಂದು ಪ್ರಕರಣದ ವಿಚಾರಣೆ ನಡೆಸಿದ ಪೀಠ ಪ್ರಕರಣದ ವಿಚಾರಣೆಯನ್ನು ನ.೦೩ ಕ್ಕೆ ಮುಂದೂಡಿದೆ.
ಮಂಡ್ಯ ನಗರಸಭೆ ಅವಧಿ ನ.೦೨ ಕ್ಕೆ ಅಂತ್ಯಗೊಳ್ಳಲಿದ್ದು ಆಡಳಿತಾಧಿಕಾರಿ ನೇಮಕವಾಗಬೇಕಿದೆ.
ಹೈಕೋರ್ಟ್ ಆದೇಶದ ಗೊಂದಲ: ಪ್ರಕರಣದ ಆರಂಭದ ವಿಚಾರಣೆ ಸಂಧರ್ಭದಲ್ಲಿ ಅವಧಿ ಮುಗಿಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸದಂತೆ ಕೋರ್ಟ್ ಆದೇಶ ನೀಡಿತು.ನಗರಸಭಾ ಸದಸ್ಯರು ಸಹ ಎರಡನೇ ಅವಧಿಯಲ್ಲಿ ಮೀಸಲಾತಿ ಪ್ರಕರಣದಿಂದಾಗಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆದಿದೆ.ಈ ಅವಧಿಯನ್ನು ತಮ್ಮ ಅವಧಿಯ ಭಾಗವಾಗಿ ಪರಿಗಣಿಸದಂತೆ ಕೋರಿದ್ದರು.
ಆದರೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕೌನ್ಸಿಲ್ ಸಭೆಗಳು ನಡೆದಿದ್ದು.ನಗರ ಸಭಾ ಸದಸ್ಯರು ಅನುದಾನ ಮತ್ತು ಭತ್ಯೆ ಪಡೆದಿದ್ದು ಸದಸ್ಯರ ಅಧಿಕಾರಕ್ಕೆ ಯಾವುದೆ ತಡೆ ಉಂಟಾಗಿರುವುದಿಲ್ಲ ಅದ್ದರಿಂದ ಆಡಳಿತಾಧಿಕಾರಿಗಳ ಅವಧಿಯನ್ನು ಪರಿಗಣಿಸಿ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡಬೇಕು ಎಂಬುದು ನಗರಾಭಿವೃದ್ಧಿ ಇಲಾಖೆಯ ವಾದವಾಗಿದೆ.ಈ ಹಿನ್ನೆಲೆಯಲ್ಲಿ ಅವಧಿ ಮುಗಿದರು ಹಲವು ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲು ಹಲವು ಜಿಲ್ಲಾಧಿಕಾರಿಗಳು ಹಿಂಜರಿಕೆ ತೋರಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಸಮರ್ಪಕವಾಗಿ ಕೋರ್ಟ್ ಗೆ ಮನವರಿಕೆ ಮಾಡುವಲ್ಲಿ ನಗರಾಭಿವೃದ್ಧಿ ಇಲಾಖೆ ಸಹ ವಿಫಲವಾಗಿದ್ದು ಪರಿಣಾಮ ಈ ಗೊಂದಲ ಮುಂದುವರಿಯುತ್ತಿದೆ ಎನ್ನಲಾಗಿದೆ.ನ ೦೩ ರಂದು ಈ ಪ್ರಕರಣ ಇತ್ಯರ್ಥ ವಾಗುವುದೆ ಕಾದು ನೋಡಬೇಕಿದೆ.


