ಮೃತ ರೈತ ಕುಟುಂಬಕ್ಕೆ ಐದು ಲಕ್ಷ ಪರಿಹಾರ:ಚಲುವರಾಯಸ್ವಾಮಿ
ಬೆಂಗಳೂರು: ನಿನ್ನೆ ದಿನ ಮಂಡ್ಯ ಡಿಸಿ ಕಚೇರಿ ಎದುರು ಪೇಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಮಂಜೇಗೌಡ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಲಾಗುವುದು.ಸಿಎಂ ಜೊತೆ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು.ಮೃತ ರೈತನ ಭೂವ್ಯಾಜ್ಯಕ್ಕೆ ಸಂಬಂದಿಸಿದಂತೆ ಅಗತ್ಯ ನೆರವು ನೀಡಲಾಗುವುದು.ಉಳುಮೆ ಪ್ರದೇಶ ಡೀಮ್ಡ್ ಅರಣ್ಯವಾಗಿದ್ದರು ಅದನ್ನು ಮೃತರ ಕುಟುಂಬಕ್ಕೆ ಕೊಡಿಸಲಾಗುವುದು.ರೈತರು ಯಾವುದೆ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು.ಅಗತ್ಯ ಬಿದ್ದರೆ ನೇರವಾಗಿ ತಮ್ಮನ್ನು ಕಾಣುವಂತೆ ಕೋರಿದ್ದಾರೆ.
ಸಾಂಸ್ಕೃತಿಕ ಪ್ರತಿರೋಧ:ಮೃತ ರೈತನ ಸಾವಿನ ಕುರಿತು ಸರಕಾರಿ ಅಧಿಕಾರಿಗಳ ಜಡತ್ವದ ವಿರುದ್ದ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮವನ್ನು ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿವೆ.ಇಂದು ಸಂಜೆ ನಾಲ್ಕು ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕವಿಗಳು ಕವಿತೆ ವಾಚಿಸಲಿದ್ದು.ಕಲಾವಿದರು ಚಿತ್ರ ಬರೆದು ಪ್ರತಿಭಟಿಸಲಿದ್ದಾರೆ.


