ಬೀದರ್: ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಆರೋಪಿಸಿದೆ.
ಈ ಸಂಬಂಧ ಸಂಘದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಕೆಲ ಅಧಿಕಾರಿಗಳು ಸೇರಿಕೊಂಡು ನಿಯಮ ಉಲ್ಲಂಘಿಸಿದ್ದಾರೆ. ಸಮಗ್ರ ಶಿಕ್ಷಣ ಬೀದರ್ ಕಚೇರಿಯಲ್ಲಿ 22 ಅಕ್ರಮ ನೇಮಕ ನಡೆದಿದೆ. ಇದರಲ್ಲಿ ಇಬ್ಬರಿಗೆ ವಿದ್ಯಾರ್ಹತೆ ಇಲ್ಲ. ಆದರೂ ನೇಮಕಾತಿ ಮಾಡಲಾಗಿದೆ. ನಿಯಮದ ಪ್ರಕಾರ ಟೆಂಡರ್ ಕರೆದು, ನೇಮಕ ಮಾಡಬೇಕಿದೆ. ಜಿಲ್ಲಾಧಿಕಾರಿ ಹೆಸರಿನಲ್ಲಿ ನೇಮಕಾತಿ ನಡೆಸಲಾಗಿದೆ. 10 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್, ಜಿಲ್ಲಾಧ್ಯಕ್ಷ ಸಂಗಮೇಶ ಏಣಕೂರ್, ಜಿಲ್ಲಾ ಸಂಯೋಜಕ ಜೇಮ್ಸ್ ಇಸ್ಲಾಂಪೂರ, ಶಿವರಾಜ ನೆಲವಾಳಕರ್, ಡ್ಯಾನಿಯಲ್, ವಿಲ್ಸನ್ ಕುಡ್ತೆನೋರ್, ಯೊಹಾನ್ ಅರಮನೆ, ಅಂಬಾದಾಸ್ ಬೇಲೂರೆ, ಶ್ರೀನಾಥ ದರ್ಗಾ, ಮೋಹನ್ ಮಾಳಗೆ, ಸ್ವಾಮಿದಾಸ ಚಿಲ್ಲರ್ಗಿ, ಎಂ.ಡಿ. ಸಿರಾಜ ಪಟೇಲ್ ಸೇರಿದಂತೆ ಇತರರು ಹಾಜರಿದ್ದರು.


