ಹುಬ್ಬಳ್ಳಿ ನಗರದಲ್ಲಿ ಭಾನುವಾರ ನಡೆದ 2025ನೇ ಸಾಲಿನ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಡ್ಯ ವೈದ್ಯರ ತಂಡವು ವಿಜಯಶಾಲಿಯಾಗಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮಂಡ್ಯ ತಂಡವನ್ನು ಮಂಡ್ಯ ವೈದ್ಯಕೀಯ ಕಾಲೇಜಿನ ಡಾ. ಮೋಹನ್, ತ್ರಿನೇತ್ರ ಕಣ್ಣಿನ ಆಸ್ಪತ್ರೆಯ ಡಾ. ಅವಿನಾಶ್, ಡಾ.ಶಶಾಂಕ್, ಡಾ. ಭರತ್, ಡಾ.ವಿವೇಕ್, ಡಾ.ಸುನಿಲ್, ಡಾ.ಕಿರಣ್, ಡಾ.ತೇಜಸ್ವಿ, ಡಾ.ಪ್ರವೀಣ್, ಡಾ.ಕಾರ್ತಿಕ್, ಡಾ.ಶ್ರೀನಿಧಿ, ಡಾ.ನಕುಲ್, ಡಾ.ಕೀರ್ತಿ ಸಾಗರ್ ಹಾಗೂ ಡಾ. ಸಚಿನ್ ಪ್ರತಿನಿಧಿಸಿದ್ದರು.
ಪಂದ್ಯಾವಳಿಯಲ್ಲಿ ರಾಜ್ಯದಾದ್ಯಂತ ಒಟ್ಟು 32 ವೈದ್ಯರ ತಂಡಗಳು ಭಾಗವಹಿಸಿದ್ದವು. ವಿಜೇತ ಮಂಡ್ಯ ವೈದ್ಯರ ತಂಡಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಪಾರಿತೋಷಕ ಹಾಗೂ ಬಹುಮಾನ ವಿತರಿಸಿದರು.

ಸಾಧನೆ ತೋರಿದ ವೈದ್ಯರಿಗೆ ಅಭಿನಂದನೆ
ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮಂಡ್ಯ ವೈದ್ಯರ ತಂಡ ಸಕ್ಕರೆ ನಾಡಿನ ಕೀರ್ತಿ ಹೆಚ್ಚಿಸಿದೆ. ಜನಸೇವೆಯ ಜತೆಗೆ ಆಟದಲ್ಲೂ ಮುಂದಿರುವ ಮಂಡ್ಯದ ವೈದ್ಯರ ಈ ಸಾಧನೆ ಅಭಿನಂದನೆಗಳು ಎಂದು ಕನ್ನಡಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


