ಫೆ 15 ರೊಳಗೆ ಒತ್ತುವರಿ ತೆರವಿಗೆ ಸೂಚನೆ
ಮಂಡ್ಯ ನಗರದ ವ್ಯಾಪ್ತಿಯಲ್ಲಿ ರಾಷ್ಟೀಯ ಹೆದ್ದಾರಿ ಹಾದುಹೋಗುವ ನಂದಾ ವೃತ್ತದಿಂದ ಮಹವೀರ ವೃತ್ತದವರೆಗಿನ ಪಾದಚಾರಿ ಮಾರ್ಗದ ಒತ್ತುವರಿಯನ್ನು ಫೆ 15 ರೊಳಗೆ ತೆರವುಗೊಳಿಸಿ ವಿಶಾಲ ಪಾದಚಾರಿ ಮಾರ್ಗ ರೂಪಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವನಂದಾ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣಾದಲ್ಲಿ ರಾಷ್ಡೀಯ ಹೆದ್ದಾರಿ ಪ್ರಾಧಿಕಾರ.ತಹಶೀಲ್ದಾರ್.ಉಪವಿಭಾಗಾಧಿಕಾರಿ.ನಗರಸಭೆ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ೩೦ಕೋಟಿ ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್ ನಿಂದ ಕಿರಂಗೂರುವರೆಗೆ ಹೆದ್ದಾರಿ ನಿರ್ಮಾಣ ಹಾಗೂ ನಗರದಲ್ಲಿ ಪಾದಚಾರಿ ಮಾರ್ಗದ ವಿಸ್ತರಣೆಯಾಗುತ್ತಿದೆ.ಕೆಲವೆಡೆ ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಸಾರ್ವಜನಿಕರು ಅನಾನೂಕೂಲ ಎದುರಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ.ನಗರದ ಅಭಿವೃದ್ಧಿ ಹಾಗೂ ಸುವ್ಯವಸ್ಥಿತ ಸಂಚಾರದ ಕಾರಣಕ್ಕೆ ಫೆ15 ರೊಳಗೆ ಒತ್ತುವರಿ ತೆರವುಗೊಳ್ಳಬೇಕು ಅದಕ್ಕು ಮುಂಚೆ ನಿಯಮಾನುಸಾರ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ಮಂಡ್ಯ ನಗರದಲ್ಲಿ ಕ್ರಮಬದ್ದವಾಗಿ ಪಾದಚಾರಿ ಮಾರ್ಗ ನಿರ್ಮಾಣವಾಗುತ್ತಿಲ್ಲ.ಕೆಲವೆಡೆ ಮುವ್ವತ್ತು ಅಡಿಗೆ ಮತ್ತೊಂದು ಕಡೆ ಮೂರು ಅಡಿಗೆ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ.ನಿಯಮದ ಪ್ರಕಾರ ರಾಷ್ಟೀಯ ಹೆದ್ದಾರಿ ಮಧ್ಯಭಾಗದಿಂದ ಎರಡು ಭಾಗದಲ್ಲು ತಲಾ ೨೦ ಮೀಟರ್ ಅಂತರದವರೆಗೆ ಯಾವುದೆ ಕಟ್ಟಡ ನಿರ್ಮಿಸುವಂತಿಲ್ಲ.ಆದರೆ ಒತ್ತುವರಿ ತೆರವುಗೊಳಿಸಿ ಪಾದಚಾರಿ ಮಾರ್ಗ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ.ದಾಸೇಗೌಡ ವೃತ್ತದಲ್ಲಿ ರಸ್ತೆಗೂ ಪಾದಚಾರಿ ಮಾರ್ಗಕ್ಕು ಯಾವುದೆ ವ್ಯತ್ಯಾಸ ಇಲ್ಲದಂತಾಗಿದೆ.ಭೂಗತ ಗ್ಯಾಸ್ ಪೈಪ್ ಲೈನ್ ಇದರಿಂದ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ.ನಗರದುದ್ದಕ್ಕು ಸಮಪ್ರಮಾಣದ ಪಾದಚಾರಿ ಮಾರ್ಗ ನಿರ್ಮಾಣವಾಗಬೇಕು ಯಾವುದೆ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.
.ನಗರಸಭೆ ಆಯುಕ್ತೆ ಪಂಪಾಶ್ರೀ ಮಾತನಾಡಿ ನಂದಾ ವೃತ್ತದಿಂದ ಮಹವೀರ ವೃತ್ತದವರೆಗೆ ಒಟ್ಟು ೩೨ ಆಸ್ತಿಗಳು ಇದ್ದು ಈಗಾಗಲೇ ೧೪ ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಇನ್ನುಳಿದವರಿಗೂ ಜ ೩೦ ರೊಳಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಮಾಲೀಕರ ಆಸ್ತಿ ಖಾತೆಯ ಬದಲು ಮೂಲ ಖರೀದಿ ಮಂಜೂರಾತಿ ದಾಖಲೆಗಳನ್ನು ಪರೀಶೀಲಿಸಿ ಫೆ೧೫ ರೊಳಗೆ ಒತ್ತುವರಿ ತೆರವುಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ವಡಿ ಜಯರಾಮ್ ಸಭೆಯಲ್ಲಿ ಮಾತನಾಡಿ ನಗರದಲ್ಲಿ ನಕ್ಷೇ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದು ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ನಗರಸಭೆ ವಿಫಲವಾಗಿದೆ.ವಿವಿ ರಸ್ತೆಯಲ್ಲಿ ಎಸ್ ಬಿ ಐ ಬ್ಯಾಂಕ್ ಎದುರಿನ ಗಲ್ಲಿಗೆ ಖಾಸಗಿ ವ್ಯಕ್ತಿಗಳು ಬೀಗ ಜಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕುಡಿಯುವ ನೀರು ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ.ಸರ್ವಿಸ್ ರಸ್ತೆಗಳಲ್ಲಿ ಅವೈಜ್ನಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.ಹಲವೆಡೆ ಗ್ರಾಮಗಳ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದರು ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಮಾತ್ರವೆ ಆದ್ಯತೆ ನೀಡಿದೆ.ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆ ಪೂರ್ಣಗೊಳಿಸಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.
ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ವಿಶ್ವ ಮಾತನಾಡಿ.ಹೆದ್ದಾರಿಯಲ್ಲಿ ಕುಡಿಯುವ ನೀರು ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಸರ್ವಿಸ್ ರಸ್ತೆಗಳಲ್ಲಿ ಚರಂಡಿ ನೀರು ಹರಿಯದಂತೆ ಚರಂಡಿ ನಿರ್ಮಿಸಲಾಗುವುದು.ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆಯನ್ನು ಸಂಪೂರ್ಣಗೊಳಿಸಲು ಅಗತ್ಯ ಅನುಮತಿ ಪಡೆದು ಕಾಮಗಾರಿ ಸಂಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ನಗರಸಭೆ ಆಯುಕ್ತ ಪಂಪಾಶ್ರೀ.ಸಹಾಯಕ ಕಾರ್ಯ ಪಾಲಕ ಪುಟ್ಟಯ್ಯ.ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಶಿವಕುಮಾರ್ ಭೂದಾಖಲೆಗಳ ಸಹಾಯಕ ಅಧಿಕಾರಿ ಹಾಗೂ ಕರುನಾಡ ಸೇವಕರು ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ರಾಜೂಗೌಡ.ಮುದ್ದೇಗೌಡ.ಶಿವರಾಂ.ವೆಂಕಟೇಶ್.ಸೋಮಶೇಖರ್ ರೈತಸಂಘದ ಅಣ್ಣಯ್ಯ.ಕಿರಣ್.ಸೇರಿದಂತೆ ಹಲವರು ಸಭೆಯಲ್ಲಿ ಭಾಗೀಯಾಗಿದ್ದರು.


