Friday, February 27, 2026
spot_img

ಉರ್ದು ಅಹ್ವಾನ ಪತ್ರಿಕೆ ಪ್ರಕಟಣೆಗೆ ಕರವೇ ಜಯರಾಮ್ ಕಿಡಿ

 

ಉರ್ದು ನಾಮಫಲಕ. ಪ್ರಶ್ನಿಸಿದವರ ಮೇಲೆ ಪ್ರಕರಣ ಹಾಗೂ ಉರ್ದು ಅಹ್ವಾನ ಪತ್ರಿಕೆ ಪ್ರಕಟಣೆಗೆ ಕರವೆ ಆಕ್ರೋಶ

ಮೈಸೂರು ನಗರ ಪಾಲಿಕೆ ಅಳವಡಿಸಿರುವ ನಾಮಫಲಕದ ಮೇಲೆ ಉರ್ದು ಬಳಸಿರುವುದನ್ನು ಆಕ್ಷೇಪಿಸಿ ನಾಮಫಲಕ್ಕೆ ಮಸಿ ಬಳಿದ ಕನ್ನಡಪರ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲು ವಿಚಾರಣೆಗೆ ಕರೆದಿರುವ ಪೋಲಿಸರ ಕ್ರಮವನ್ನು ಹಾಗೂ ಆರೋಗ್ಯ ಇಲಾಖೆಯಲ್ಲಿ ಉರ್ದು ಅಹ್ವಾನ ಪತ್ರಿಕೆ ಹೊರಡಿಸಿರುವ ರಾಜ್ಯ ಸರಕಾರದ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಖಂಡಿಸಿ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಕಾರ್ಯಕ್ರಮದ ಅಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಮುದ್ರಿಸಿರುವುದು ನಿಜಕ್ಕು ಕನ್ನಡಕ್ಕೆ ಅಪಮಾನ ಎಸಗುವ ಕೃತ್ಯವಾಗಿದೆ.
ಇದಲ್ಲದೆ
ಮೈಸೂರು ನಗರ ಪ್ರವೇಶ ದ್ವಾರದಲ್ಲಿ ಅಜೀಜ್ ಸೇಠ್ ವೃತ್ತ ಎಂದು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನಾಮಫಲಕ ಅಳವಡಿಸಲಾಗಿದೆ.

ಇದರ ಜತೆಗೆ ಅನಗತ್ಯವಾಗಿ ಉರ್ದುವನ್ನು ಸಹ ನಾಮಫಲಕದಲ್ಲಿ ಅಳವಡಿಸಲಾಗಿದೆ.ಇದನ್ನು ಪ್ರಶ್ನಿಸಿ ಕನ್ನಡಪರ ಸಂಘಟನೆಗಳ ನಾಯಕರಾದ ಎಂ.ಬಿ.ನಾಗಣ್ಣಗೌಡ. ರಾಜೇಂದ್ರ ಬಾಬು.ಎಸ್ ಕೆ ರಾಜೂಗೌಡ.ಉರ್ದು ಪದಕ್ಕೆ ಮಸಿ ಬಳಿದಿದ್ದರು.

ಆಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಉರ್ದುಭಾಷಿಕರು ಧಾಂದಲೆ ಎಬ್ಬಿಸಿ ಕನ್ನಡಪರ ಹೋರಾಟಗಾರರ ಮೇಲೆ ಹಲ್ಲೆಗೂ ಮುಂದಾಗಿದ್ದರು.

ಈ ಸಂಬಂದ ಉರ್ದು ಭಾಷಿಕರಿಂದ ದೂರು ಪಡೆದ ನರಸಿಂಹ ರಾಜ ಪೋಲಿಸ್ ಠಾಣೆಯ ಪೋಲಿಸರು ಕನ್ನಡಪರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವ ಸಲುವಾಗಿ ವಿಚಾರಣೆಗೆ‌ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೆ ಆಡಳಿತ ಭಾಷೆಯಾಗಿದ್ದು.ಸರಕಾರಿ ನಾಮಫಲಕಗಳಲ್ಲಿ ಉರ್ದು ಬಳಸಲು ಯಾವುದೆ ಅವಕಾಶವಿಲ್ಲದಿದ್ದಾಗೀಯೂ ಉರ್ದು ಬಳಸಿ ಕನ್ನಡಿಗರಿಗೆ ಸವಾಲು ಎಸೆಯುವ ಧಾರ್ಷ್ಯ ಪ್ರದರ್ಶಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಕಾಂಗ್ರೆಸ್ ಸರಕಾರದ ಕನ್ನಡ ವಿರೋಧಿ ಹಾಗೂ ಉರ್ದುಪರವಾಗಿನ ಧೋರಣೆಯಿಂದಾಗಿ ಕರ್ನಾಟಕದಲ್ಲಿ ಕನ್ನಡಿಗರು ದ್ವಿತೀಯ ದರ್ಜೆ ನಾಗರೀಕರಂತೆ ಬದುಕುವಂತಾಗಿದೆ.
.ಆರೋಗ್ಯ ಇಲಾಖೆಯಲ್ಲಿ ಉರ್ದು ಅಹ್ವಾನ ಪತ್ರಿಕೆ ಪ್ರಕಟಿಸುವ ಕಾಂಗ್ರೆಸ್ ಸರಕಾರ ಮುಂದಿನ ದಿನಗಳಲ್ಲಿ ಉರ್ದುವನ್ನು ಕರ್ನಾಟಕದ ಆಡಳಿತ ಭಾಷೆಯಾಗಿ ಘೋಷಿಸಿದರೂ ಅಶ್ಚರ್ಯವಿಲ್ಲ.

ಅಂದು ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ರಾಷ್ಟ್ರ ಕವಿ ಕುವೆಂಪು ಹೇಳಿದರು.ಆದರೆ ಇಂದು ಕನ್ನಡಕ್ಕಾಗಿ ಕೈ ಎತ್ತಿದವರ ಮೇಲೆ ಕಾಂಗ್ರೆಸ್ ಸರಕಾರ ಮೊಕದ್ದಮೆ ದಾಖಲಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದೆ.

ನಗರಪಾಲಿಕೆಯ ಅಧಿಕೃತ ಫಲಕದ ಮೇಲೆ ಉರ್ದು ಅಳವಡಿಸಿರುವ ಕುರಿತು ಮೈಸೂರು ಪಾಲಿಕೆಗೆ ದೂರು ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲ.

ಕೂಡಲೆ ಸರಕಾರ ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು.ಪ್ರಕರಣ ದಾಖಲಿಸುವ ಪ್ರಯತ್ನದಿಂದ ಹಿಂದೆ ಸರಿಯಬೇಕು.

ಮೈಸೂರು ನಗರಪಾಲಿಕೆಯ ನಾಮಫಲಕದ ಮೇಲಿನ ಉರ್ದು ಅಕ್ಷರಗಳನ್ನು ಅಳಿಸಬೇಕು.ಉರ್ದು ಜಾಹೀರಾತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!