Wednesday, September 16, 2026
spot_img

ಕಸಾಪ ರಾಜ್ಯಾಧ್ಯಕ್ಷ ಹುದ್ದೆ ಈ ಬಾರಿ ಮಹಿಳೆಗೆ:ವಿಜಯಲಕ್ಷ್ಮೀ ಬಾಳೇಕುಂದ್ರಿ ಪ್ರಬಲ ಅಭಿಮತ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ತಾನೂ ಸಹ ಪ್ರಬಲ ಅಕಾಂಕ್ಷಿ ಎಂದು ವೈದ್ಯೆ ವಿಜಯಲಕ್ಷ್ಮೀ ಬಾಳೇಕುಂದ್ರಿ ಘೋಷಿಸಿದರು.

ಮಂಡ್ಯ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಸಾಹಿತ್ಯ ಪರಿಷತ್ತಿಗೆ ೧೧೧ ವರ್ಷಗಳ ಪರಂಪರೆಯಿದೆ.

ಆದರೆ ಈವರೆಗೆ ಯಾವೊಬ್ಬ ಮಹಿಳೆಯು ಪರಿಷತ್ತಿನ ಅಧ್ಯಕ್ಷ ಸ್ಥಾನ ಅಲಂಕರಿಸದಿರುವುದು ವಿಷಾದಕರವಾಗಿದೆ.

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹಾಗೂ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅವನತಿಯ ದಾರಿ ಹಿಡಿದಿವೆ ಎಂದು ಡಾಕ್ಟರ್ ವಿಜಯಲಕ್ಷ್ಮಿ ಬಾಳೆಕುಂದ್ರಿ ಅಭಿಪ್ರಾಯಪಟ್ಟರು.

ಮುಂಬರುವ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಕನ್ನಡ ನಾಡಿನ ಸಾಹಿತ್ಯ ಅಭಿಮಾನಿಗಳು ನಿಜವಾದ ಕನ್ನಡದ ಅಭಿಮಾನಿಗಳು ನನ್ನನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಕನ್ನಡ ನೆಲ ಜಲ ಭಾಷೆ ರಕ್ಷಣೆಗೆ ಅನುವು ಮಾಡಿ ಕೊಡಬೇಕೆಂದು ಮನವಿ ಮಾಡಿದರು.

ಶತಮಾನಕ್ಕು ಮೀರಿದ ಪರಿಷತ್ತಿನ ಭವ್ಯ ಪರಂಪರೆಯನ್ನು ಗೌರವದಿಂದ ಮುಂದುವರಿಸುತ್ತಲೇ ಬದಲಾಗುತ್ತಿರುವ ಕಾಲದ ಅಗತ್ಯಗಳಿಗೆ ಸ್ಪಂದಿಸುವಂತೆ ಅದರ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಕನ್ನಡಿಗರಿಗೆ ಪರಿಷತ್ತನ್ನು ಇನ್ನಷ್ಟು ಹತ್ತಿರವಾಗಿಸುವ ಆಶಯವನ್ನು ಹೊಂದಿದ್ದೇನೆ.

ಸಾಹಿತ್ಯದೊಂದಿಗೆ ವಿಜ್ಞಾನ ಶಿಕ್ಷಣ ಆರೋಗ್ಯ ತಂತ್ರಜ್ಞಾನ ಮತ್ತು ಸಮಕಾಲಿನ ಚಿಂತನೆಗಳನ್ನು ಬೆಳೆಸಬೇಕು ಹಿರಿಯರ ಅನುಭವ ಮತ್ತು ಯುವಜನರ ಹೊಸ ಆಲೋಚನೆಗಳಿಗೆ ಸಮಾನ ವೇದಿಕೆ ಕಲ್ಪಿಸಬೇಕು ಗ್ರಾಮೀಣ ಕನ್ನಡಿಗರಿಂದ ಜಾಗತಿಕ ಕನ್ನಡಿಗರವರೆಗೂ ಎಲ್ಲರನ್ನೂ ಒಳಗೊಳ್ಳುವ ಕ್ರಿಯಾಶೀಲ ಜನ ಮುಖಿ ಪರಿಸರ ರೂಪಿಸಬೇಕು.

ಕನ್ನಡದ ಕೆಲಸ ಜನರ ನಡುವೆ ನಡೆಯಬೇಕು ಈ ದೃಷ್ಟಿಕೋನದಿಂದ ಸ್ಪಷ್ಟ ಸಂಕಲ್ಪದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಇದುವರೆಗೂ ಒಬ್ಬ ಹೆಣ್ಣು ಮಗಳು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಸ್ಥಾನ ದೊರಕಿಲ್ಲ. ಆದ್ದರಿಂದ ಈ ಬಾರಿ ಮಹಿಳೆಯರಿಗೆ ಅವಕಾಶ ಕೊಟ್ಟು ಆಯ್ಕೆ ಮಾಡಿ ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಜೀವಿ ಕುಮಾರ್ ಶಿವಪ್ರಕಾಶ್ ಬಾಬು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!