ಭೀಕರ ಅಪಘಾತ. ಒಂದೇ ಕುಟುಂಬದ ಐವರು ಸಾವು
ಚನ್ನಪಟ್ಟಣ:
ಮಧ್ಯಾಹ್ನ ತಾಲೂಕು ಲಂಬಾಣಿ ತಾಂಡ್ಯ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಆಲ್ಟೊ ಕಾರು ಹಾಗೂ ಇನ್ನೋವಾ ಕಾರುಗಳ ಮಧ್ಯೆ ಅಪಘಾತವಾಗಿದ್ದು, ರವಿ ಪೂಜಾರಿ ಬಿನ್ ಭೀಮಪ್ಪ ಪೂಜಾರಿ 46 ವರ್ಷ, ಕೆಂಗೇರಿ, ಬೆಂಗಳೂರು ಹಾಗೂ ಅವರ ಮಕ್ಕಳಾದ ಇಂಚರ ಪೂಜಾರ್ 14 ವರ್ಷ,ಹಾಗೂ ಸಿರಿ ಪೂಜಾರ್ 2 ವರ್ಷ ರವರುಗಳು ಮೃತಪಟ್ಟಿದ್ದಾರೆ.
ಪತ್ನಿ ಲಕ್ಷ್ಮಿ ಪೂಜಾರ್ 40 ವರ್ಷ ಹಾಗೂ ಮಗಳು ಶಾಂತಲಾ ಪೂಜಾರ್ 8 ವರ್ಷ ರವರುಗಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿರುತ್ತಾರೆ.
ಈ ಸಂಬಂಧವಾಗಿ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಮೋ.ಸಂಖ್ಯೆ 75/2023 ಕಲಂ 279,337,304A ಐಪಿಸಿ ರೀತಿಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೃತಪಟ್ಟಿರುವ ರವಿ ಪೂಜಾರಿ ಬನ್ ಭೀಮಪ್ಪ, ಇಂಚರ ಪೂಜಾರ್ ,ಸಿರಿ ಪೂಜಾರ್, ಲಕ್ಷ್ಮಿ ಪೂಜಾರ್ ಹಾಗೂ ಶಾಂತಲಾ ಪೂಜಾರ್ ರವರುಗಳ ಮೃತದೇಹವನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಸಿದ್ದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ರವಿ ಪೂಜಾರ್ ರವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ಯವರಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಕರಾಗಿದ್ದು, ಕೆಂಗೇರಿ ಯಲ್ಲಿ ವಾಸವಿದ್ದರು. ಅವರ ಪತ್ನಿಯ ತವರೂರಾದ ಟಿ ನರಸೀಪುರ ಕ್ಕೆ ಕುಟುಂಬದ ಕಾರ್ಯಕ್ರಮ ಇದ್ದುದರಿಂದ ಕುಟುಂಬದ ಐವರು ಅವರ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದಾಗ ಮುಂದಿನ ಚಕ್ರ ಸಿಡಿದು, ರಸ್ತೆ ವಿಭಜಕ ದಾಟಿ ಮೈಸೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಅಸುನೀಗಿ, ಮತ್ತೀರ್ವರು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು, ನೆರೆದಿದ್ದ ಸ್ಥಳೀಯರ ಕಣ್ಷಂಚಿನಲ್ಲೂ ನೀರು ಸುರಿಯುತ್ತಿತ್ತು.
ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತರಾಗಿದ್ದಾರೆ. ನಾನು ಸ್ಥಳ ಪರಿಶೀಲನೆ ಮಾಡಿದ್ದು, ಅಪಘಾತವಾಗಲು ಸ್ಪಷ್ಟ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ.
ಕಾರ್ತಿಕ್ ರೆಡ್ಡಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ