ಕನ್ನಡಹೋರಾಟಗಾರರ ಬಿಡುಗಡೆಗೆ ಆಗ್ರಹಿಸಿ ರಸ್ತೆತಡೆ
ಮಂಡ್ಯ: ಡಿ೨೯. ಹೆಸರಲಗೆಯಲ್ಲಿ ಕನ್ನಡ ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಯಣಗೌಡ ಸೇರಿದಂತೆ ನೂರಾರು ಕನ್ನಡ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಹಾಗೂ ರೈತಸಂಘ ಜಂಟೀಯಾಗಿ ರಸ್ತೆತಡೆ ನಡೆಸಿ ಪ್ರತಿಭಟನೆ ದಾಖಲಿಸಿದವು.
ಇಂದು ಬೆಂಗಳೂರು ಮೈಸೂರು ಹೆದ್ದಾರಿಯ ಸಂಜಯ ವೃತ್ತದಲ್ಲಿ ರಸ್ತೆಗಿಳಿದ ರೈತಸಂಘ ಕರುನಾಡ ಸೇವಕರು ಹಾಗೂ ಕನ್ನಡ ಸೇನೆ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ರಸ್ತೆತಡೆ ಆರಂಭಿಸಿದರು.
ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರುನಾಡ ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಇದು ಕೇವಲ ಹೆಸರಲಗೆಯ ಮೇಲೆ ಕನ್ನಡ ಅಳವಡಿಸುವ ಪ್ರಶ್ನೆಯ ಹೋರಾಟವಲ್ಲ.ಕನ್ನಡಿಗರ ಉದ್ಯೋಗದ ಭವಿಷ್ಯತ್ತಿನ ಅಸ್ಮಿತೆಯ ಉಳಿವಿನ ಹೋರಾಟವಾಗಿದೆ.ಪರ ರಾಜ್ಯದ ಉದ್ದಿಮೆಗಳು ಕನ್ನಡನಾಡನ್ನು ಲೂಟಿ ಹೊಡೆಯುತ್ತಿವೆ.ಸರಕಾರದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಕಡೆಗಣಿಸಲಾಗಿದೆ.ಪ್ರಶ್ನಿಸಿದವರಿಗೆ ಜೈಲಿಗೆ ನೂಕಲಾಗುತ್ತಿದೆ.ಸ್ವತಃ ಮುಖ್ಯಮಂತ್ರಿಗಳು ತಮ್ಮನ್ನು ಕನ್ನಡರಾಮಯ್ಯ ಎಂದು ಕರೆದುಕೊಳ್ಳುತ್ತಾರೆ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಲಿ ಆಗ ಅವರು ಕನ್ನಡ ರಾಮಯ್ಯ ಎಂದು ತಮ್ಮನ್ನು ಕರೆದುಕೊಳ್ಳುವ ನೈತಿಕತೆ ಬರಲಿದೆ ಎಂದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ.ಕನ್ನಡ ಪರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈ ರೀತಿಯ ಬಂಧನ ನಡೆಸಲಾಗಿದೆ.ಜೈಲು ಕೇಸುಗಳಿಗೆ ಕನ್ನಡ ಹೋರಾಟಗಾರರನ್ನು ಹತ್ತಿಕ್ಕಲು ಸಾಧ್ಯವಿಲ್ಲ.ಬಂಧಿಸಿರುವ ಕನ್ನಡ ಹೋರಾಟಗಾರರ ಬಿಡುಗಡೆಯಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಶಿವಳ್ಳಿ ಚಂದ್ರು ಇಂಡುವಾಳು ಬಸವರಾಜು ಲತಾ ಶಂಕರ್ ಕನ್ನಡ ಸೇನೆಯ ಪುನೀತ್ ಕರುನಾಡ ಸೇವಕರು ಸಂಘಟನೆಯ ಮಂಡ್ಯ ನಗರಾಧ್ಯಕ್ಷ ಎಂ.ಎನ್ ಚಂದ್ರು ಗ್ರಾಮಾಂತರ ವಿಭಾಗದ ಮನು ಬೂದನೂರು.ಬಾಬು .ಶೇಖರ್.ಸಿದ್ದೇಗೌಡ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗೀಯಾಗಿದ್ದರು.ಪೋಲಿಸರ ಮನವಿಗೆ ಸ್ಪಂದಿಸಿ ಅರ್ಧಗಂಟೆ ಬಳಿಕ ರಸ್ತೆತಡೆ ತೆರವುಗೊಳಿಸಲಾಯಿತು