ಮಂಡ್ಯ.ಏ.15(ಕರ್ನಾಟಕವಾರ್ತೆ):-
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಭಾರತ ಚುನಾವಣಾ ಆಯೋಗದಿಂದ ಮಂಡ್ಯ ಜಿಲ್ಲೆಗೆ 5 ಮಂದಿ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಯಾವುದೇ ಅಹವಾಲುಗಳನ್ನು ಸಂಬಂಧಪಟ್ಟ ವೆಚ್ಚ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳಾದ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
ವೆಚ್ಚ ವೀಕ್ಷಕರ ವಿವರಗಳು: ಮಳವಳ್ಳಿ ವಿಧಾನಸಭಾ ಕ್ಚೇತ್ರಕ್ಕೆ ಐ.ಆರ್.ಎಸ್ ಅಧಿಕಾರಿ ಕೇದುಪ್ ಬುಟಿಯಾ(ಮೊ.ಸಂ.9141010129),ಸಂಪರ್ಕ ಅಧಿಕಾರಿಯಾಗಿ ಕರ್ನಾಟಕ ಹೌಸಿಂಗ್ ಬೋರ್ಡ್‍ನ ಸಹಾಯಕ ಕಾರ್ಯಪಾಲಕ ಅಭಿಯಂತರ ಲಾರೆನ್ಸ್ (ಮೊ.ಸಂ.9448872232).
ಮದ್ದೂರು ವಿಧಾನಸಭಾ ಕ್ಚೇತ್ರಕ್ಕೆ ಐ.ಆರ್.ಎಸ್ ಅಧಿಕಾರಿ ಗೌರಿಶಂಕರ್ ಸಿಂಗ್,(ಮೊ.ಸಂ.9141010130), ಸಂಪರ್ಕ ಅಧಿಕಾರಿಯಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ದಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ದರ್ಶನ್(ಮೊ.ಸಂ.9742326403).
ಮೇಲುಕೋಟೆ ಹಾಗೂ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಐ.ಆರ್.ಎಸ್ (ಸಿ ಅಂಡ್ ಸಿಇ) ಅಧಿಕಾರಿ ಪಲ್ಲವ್ ಸಕ್ಸೇನಾ(ಮೊ.ಸಂ.9141010131), ಸಂಪರ್ಕ ಅಧಿಕಾರಿಯಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಂಕರ್(ಮೊ.ಸಂ.944810109).
ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಐ.ಆರ್.ಎಸ್ (ಸಿ ಅಂಡ್ ಸಿಇ) ಅಧಿಕಾರಿ ಲೋಕೇಶ್ ದಮೊರ್(ಮೊ.ಸಂ.9141010132), ಸಂಪರ್ಕ ಅಧಿಕಾರಿಯಾಗಿ ಕೆಆರ್‍ಐಡಿಎಲ್ ನ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್(ಮೊ.ಸಂ.7349493368)
ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಐ.ಆರ್.ಎಸ್ (ಸಿ ಅಂಡ್ ಸಿಇ) ಅಧಿಕಾರಿ ಗೌರವ್ ಚಂದೇಲ್(ಮೊ.ಸಂ.9141010133) ಸಂಪರ್ಕ ಅಧಿಕಾರಿಯಾಗಿ ವಕ್ಫ್ ಬೋರ್ಡ್ ಜಿಲ್ಲಾ ಅಧಿಕಾರಿ ಮುಸ್ತಾಕ್(ಮೊ.ಸಂ.9686617006) ಅವರನ್ನು ನೇಮಕ ಮಾಡಲಾಗಿದೆ.
====================