ಟ್ರಯಲ್ ಬ್ಲಾಸ್ಟ್ ವಿರುದ್ಧ ಹೋರಾಟಕ್ಕೆ ನಿರ್ಣಯ
ಮಂಡ್ಯ: ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಇರುವ ಅಪಾಯದ ಬಗ್ಗೆ ತಿಳಿಯಲು ರಾಜ್ಯ ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ಗೆ ನೀಡಿರುವ ಆದೇಶದ ವಿರುದ್ಧ ಉಗ್ರ ಪ್ರತಿಭಟನೆ ಜತೆಗೆ ಕಾನೂನು ಹೋರಾಟ ನಡೆಸಲು ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ನಿರ್ಣಯ ಕೈಗೊಂಡಿವೆ.
ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕದ ನೇತೃತ್ವದÀಲ್ಲಿ ವಿವಿಧ ಜನಪರ ಸಂಘಟನೆಗಳ ಮುಖಂಡರೊAದಿಗೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಯಿತು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಹಿಂದಿನಿAದಲೂ ರೈತಸಂಘ ಟ್ರಯಲ್ ಬ್ಲಾಸ್ಟ್ ವಿರೋಧಿಸುತ್ತಾ ಬಂದಿದೆ. ಕೊನೆ ಉಸಿರಿರುವವರೆಗೂ ಗಣಿಗಾರಿಕೆಯನ್ನು ವಿರೋಧಿಸುವ ನಿಲುವಿಗೆ ರೈತ ಸಂಘ ಕಂಕಣಬದ್ಧವಾಗಿದೆ. ಟ್ರಯಲ್ ಬ್ಲಾಸ್ಟ್ ನಡೆಸಬೇಕು ಎನ್ನುವುದಾದರೆ ಜಲಾಶಯದ ೨೦ ಕಿ.ಮೀ. ವ್ಯಾಪ್ತಿ ಮೀರಿ ಬೇಕಾದರೆ ನಡೆಸಿಕೊಳ್ಳಲಿ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತಸಂಘದ ನಿಲುವೇ ನನ್ನ ನಿಲುವಾಗಿದೆ. ೮ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆಯ ಬದುಕಿಗಾಗಿ ಪರ್ಯಾಯ ಆಲೋಚನೆಗಳನ್ನು ಮಾಡಬೇಕಿದೆ. ನ್ಯಾಯಾಂಗದ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸಬೇಕು. ಗಣಿಗಾರಿಕೆ ವಿರುದ್ಧ ತಾವು ಯಾವುದೇ ಹೋರಾಟಕ್ಕೆ ಸಿದ್ಧ. ನನ್ನ ಮೇಲೆ ಯಾವ ರಾಜಕೀಯ ಒತ್ತಡವೂ ಇಲ್ಲ. ಯಾವುದೇ ಆತಂಕಬೇಡ ಎಂದು ಭರವಸೆ ನೀಡಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಟ್ರಯಲ್ ಬ್ಲಾಸ್ಟ್ ನಡೆಸಲು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನು ಬೀದಿ ಹೋರಾಟದಿಂದ ಹಿಮ್ಮೆಟ್ಟಿಸಲು ಕಷ್ಟ. ಆದ್ದರಿಂದ ಕಾನೂನು ಹೋರಾಟದ ಮೂಲಕ ಹೋರಾಟ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಚಿಂತಕ ಪ್ರೊ.ಹುಲ್ಕೆರೆ ಮಹಾದೇವ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ವಿವಿಧ ಸಂಘಟನೆಗಳು ಮುಖಂಡರಾದ ಜಿ.ಮಲ್ಲಿಗೆರೆ ಅಣ್ಣಯ್ಯ, ಕೆನ್ನಾಳು ನಾಗರಾಜು, ಮುರುವನಳ್ಳಿ ಶಂಕರ್, ಸಿ.ಕುಮಾರಿ, ತಗ್ಗಳ್ಳಿ ಪ್ರಸನ್ನ, ವಿಜಯಕುಮಾರ್, ಎಣ್ಣೆಹೊಳೆ ಕೊಪ್ಪಲು ಮಂಜು, ರಘು, ದಯಾನಂದ್, ಗಾಣದಾಳು ನಾಗರಾಜು, ಲಿಂಗಪ್ಪಾಜಿ, ಇತರರು ಉಪಸ್ಥಿತರಿದ್ದರು.