Saturday, December 21, 2024
spot_img

ಮಂಡ್ಯ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಬೇಕು:ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ.ಅದನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರು ಅಭಿಪ್ರಾಯಪಟ್ಟರು.ಮಂಡ್ಯ ತಾಲೋಕಿನ ಹೊಸ ಬೂದನೂರು ಗ್ರಾಮದಲ್ಲಿ ಬೂದನೂರು ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಐತಿಹಾಸಿಕ. ಶ್ರೀರಂಗನಾಥ ದೇವಾಲಯ ಆದಿಚುಂಚನಗಿರಿ ಮೇಲುಕೋಟೆ ಚಲುವನಾರಯಣಸ್ವಾಮಿ ದೇವಾಲಯಗಳಿವೆ.ವಿದೇಶಗಳಲ್ಲಿ ಸಣ್ಣದೊಂದು ಪ್ರಾಚೀನ ಕಟ್ಟಡಗಳಿದ್ದರೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಧಾವಿಸುತ್ತಾರೆ.ನಮ್ಮಲ್ಲು ಆ ರೀತಿಯ ಕೆಲಸಗಳು ಆಗಬೇಕಿದೆ.ಹೊಯ್ಸಳರ ಕಾಲದ ಕಾಶೀ ವಿಶ್ವನಾಥ ದೇವಾಲಯವನ್ನು ಪ್ರವಾಸಿಗರಿಗೆ ತಲುಪಿಸುವ ಕೆಲಸ ಮಾಡಬೇಕಿದೆ.ಶಾಸಕ ರವಿಕುಮಾರ್ ರವರು ಯುವಕರಾಗಿದ್ದು ಜನರೊಂದಿಗೆ ಬೆರೆತು ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆಂದು ಅವರು ಶ್ಲಾಘನೆ ತೋರಿಸಿದರು.ಬೂದನೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ಶಾಸಕರು ಒಂದು ಕೋಟಿ ಬಿಡುಗಡೆ ಮಾಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಂಡ್ಯ ಕ್ಷೇತ್ರದ ಅಭಿವೃದ್ದಿಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರ ಜವಾಬ್ದಾರಿ ಸಹ ಇದೆ ಎಂದು ವೇದಿಕೆಯಲ್ಲಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡರ ಗಮನಸೆಳೆದರು.

ಗ್ರಾಮೀಣಾ ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ ನಾಳೆ ಮಂಡ್ಯ ಜಿಲ್ಲೆಯಲ್ಲಿ 70 ಕ್ಕು ಹೆಚ್ಚು ನೂತನ ಬಸ್ ಗಳನ್ನು ಓಡಾಡಕ್ಕೆ ಬಿಡಲಾಗುವುದು.ಬರ ಬಂದಿರುವ ಸಂಧರ್ಭದಲ್ಲಿ ಕೇಂದ್ರ ಸರಕಾರ ಕೈ ಚೆಲ್ಲಿದರು ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ.ಬೆಳೆ ವಿಮೆಯಲ್ಲಿ ೩೫ ಲಕ್ಷ ರೈತರಿಗೆ ೬೦೦ಕೋಟಿ ಪರಿಹಾರ ನೀಡಿದ್ದೇವೆ.ನಮ್ಮ ಬಗ್ಗೆ ಜನರಿಗೆ ಸದಾಭಿಪ್ರಾಯವಿದೆ.ಆದರೆ ವಿಪಕ್ಷಗಳು ಸರಕಾರದ ವಿರುದ್ದ ಯಾವುದೆ ವಿಷಯಗಳಿಲ್ಲದೆ ಅನಗತ್ಯ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ.ನಾವುಗಳು ಈ ಸಂಜೆಯ ಕಾರ್ಯಕ್ರಮಕ್ಕೆ ಗ್ಯಾರಂಟಿಗಳಿಗೆ ಸಿಮೀತವಲ್ಲ.ನಾವು ಎಲ್ಲ ಸಂಧರ್ಭದಲ್ಲಿ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಪೋಲಿಸ್ ವರಿಷ್ಟಾಧಿಕಾರಿ ಎನ್ ಯತೀಶ್.ಮೈಶುಗರ್ ಅಧ್ಯಕ್ಷ ಸಿ.ಡಿ ಗಂಗಧರ್ ಶಾಸಕ ಗಣಿಗ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಗ್ರಾಮಸ್ಥರು ಸೇರಿದ್ದು ಉತ್ಸವದ ಕಳೆಗಟ್ಟಿಸಿತ್ತು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!