ಅಮವಾಸೆಯಂದು ದಂಡಿ ನಾಮಪತ್ರ
ಮಂಡ್ಯ. ಎ.20.ಸಾಮಾನ್ಯವಾಗಿ ಅಮವಾಸೆಯ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನಾಗಲಿ ಸಮಾರಂಭವನ್ನಾಗಲಿ ಮಾಡುವುದಿಲ್ಲ.ಕಾರಣ ಅಮಾವಾಸೆ ಎಂದರೆ ಅಶುಭ ಎಂದೇ ಪುರೋಹಿತರು ವ್ಯಾಖ್ಯಾನಿಸುತ್ತಾರೆ.ಅದೇ ಕಾರಣಕ್ಕೆ ಜನಸಾಮಾನ್ಯರು ಅಮವಾಸೆಯಂದು ಯಾವುದೆ ಶುಭಕಾರ್ಯ ನಡೆಸುವುದಿಲ್ಲ.ಆದರೆ ಅಮಾವಾಸೆಯ ನಂಬಿಕೆಯನ್ನೆ ಅಲ್ಲಾಡಿಸುವಂತೆ ಮಂಡ್ಯದಲ್ಲಿ ಇಂದು ಪ್ರಮುಖ ಪಕ್ಷದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರು.ಜ್ಯಾದಳ ಬಂಡಾಯ ಅಭ್ಯರ್ಥಿಗಳಾದ ವಿಜಯಾನಂದಾ ಮಹಲಿಂಗೇಗೌಡ ಎಚ್ ಎನ್ ಯೋಗೇಶ್ ಜ್ಯಾದಳ ಅಧಿಕೃತ ಅಭ್ಯರ್ಥಿ ರಾಮಚಂದ್ರು ನಾಮಪತ್ರ ಸಲ್ಲಿಸದರು. ಬಿಜೆಪಿಯ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಸಹ ನಾಮಪತ್ರ ಸಲ್ಲಿಸಿದರು.ಇದೇ ದಿನ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಗಣಿಗ ರವಿಕುಮಾರ್ ಸಹ ನಾಮಪತ್ರ ಸಲ್ಲಿಸಿದರು.
.ಒಟ್ಟಾರೆಯಾಗಿ ಅಮಾವಾಸೆಯ ಬಗೆಗೆ ಪುರೋಹಿತರು ಮೂಡಿಸಿದ್ದ ಭಯವನ್ನೆಲ್ಲ ಪುಡಿಗಟ್ಟುವಂತೆ ನಾಮಪತ್ರಗಳು ಸಲ್ಲಿಕೆಯಾಗುತ್ತಿದ್ದು ಆ ಮುಖೇನ ಅಮವಾಸೆಯ ಬಗೆಗಿನ ಮೌಢ್ಯಕ್ಕು ಪೆಟ್ಟು ಕೊಟ್ಟಂತಾಗಿದೆ