ಕಾಂಗ್ರೇಸ್ ದಲಿತ ವಿರೋಧಿ:ಬಿಜೆಪಿ ಎಸ್ಸಿ ಮೋರ್ಚಾ
ಮಂಡ್ಯ: ಎ.೨.ಕಾಂಗ್ರೆಸ್ ಪಕ್ಷವು ದಲಿತ ವಿರೋಧಿಯಾಗಿದೆ ಆದರೂ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದು ಅಶ್ಚರ್ಯವಾಗಿದೆಯೆಂದು ಬಿಜೆಪಿ ಎಸ್ಸಿ ಮೊರ್ಚಾದ ರಾಜ್ಯಕಾರ್ಯದರ್ಶಿ ಪರಮಾನಂದಾ ಎಂಎಸ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಶವ ಸಂಸ್ಕಾರಕ್ಕೆ ಸ್ಥಳಾವಕಾಶ ನೀಡಲಿಲ್ಲ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉಪಘಟಕ ಯೋಜನೆಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಅದ್ದರಿಂದ ಕಾಂಗ್ರೆಸ್ ಪಕ್ಷ ದಲಿತ ವಿರೋಧಿಯಾಗಿದೆ ಎಂದು ತಿಳಿಸಿದರು.
ಸಂವಿಧಾನ ಬದಲಾಯಿಸುತ್ತೆವೆಂದು ಹೇಳಿದ ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗ್ಡೆ ಥರದವರಿಗೆ ಬಿಜೆಪಿ ಟಿಕೇಟ್ ನೀಡದೆ ಸೂಕ್ತ ಉತ್ತರ ನೀಡಿದೆ ಎಂದು ಸಮರ್ಥಿಸಿಕೊಂಡರು.
ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಶೇ೩ರಷ್ಟಿರುವ ಬ್ರಾಹ್ಮಣರಿಗೆ ಶೇ೧೦ರಷ್ಟು ಮೀಸಲಾತಿ ಕಲ್ಪಿಸಿರುವ ಕುರಿತು ಪತ್ರಕರ್ತರು ಎತ್ತಿದ ಪ್ರಶ್ನೆಗೆ ಉತ್ತರಿಸುತ್ತಾ ಇಡಬ್ಯ್ಲೂಎಸ್ ಮೀಸಲಾತಿಯಲ್ಲಿ ಬ್ರಾಹ್ಮಣರು ಮಾತ್ರವಲ್ಲದೆ ಒಕ್ಕಲಿಗರು ಲಿಂಗಾಯತರು ಮುಸಲ್ಮಾನರಿಗೂ ಅವಕಾಶವಿದೆ ಎಂದು ಸಮರ್ಥಿಸಿದರು.
ಗೋಷ್ಠಿಯಲ್ಲಿ ಸಿ.ಟಿ ಮಂಜುನಾಥ್ .ಹರೀಶ್ ಸೇರಿದಂತೆ ಎಸ್ಸಿ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು