*ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕರೋಟಿ ಗ್ರಾಮದಲ್ಲಿ ಕೆಸರಿನ ಗದ್ದೆಯಂತಿರುವ ಹದಗೆಟ್ಟ ರಸ್ತೆಯ ಮೇಲೆ ರಾಗಿ ಸಸಿ ನಾಟಿ ಹಾಕುವ ಮುಖಾಂತರ ವಿನೂತನವಾಗಿ ಪ್ರತಿಭಟಿಸಿ, ಸ್ಥಳೀಯ ಪಿಡಿಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಂಬನಿ ಮಿಡಿಯುತ್ತಾ ಇಡಿ ಶಾಪ ಹಾಕಿದ ಕರೋಟಿ ಗ್ರಾಮಸ್ಥರು .*
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಕರೋಟಿ ಗ್ರಾಮದ ಮುಖಂಡ ಹರೀಶ್ ಪ್ರಸ್ತುತ ಸ್ಥಳೀಯ ಪಿಡಿಓ ಬೇಜವಾಬ್ದಾರಿತನದಿಂದ ನಮ್ಮ ಗ್ರಾಮದ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿದ್ದೇವೆ . ಗ್ರಾಮಕ್ಕೆ ಕಲ್ಪಿಸುವ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಯಂತೆ ಮಾರ್ಪಟ್ಟಿವೆ. ಇಂತಹ ಹದಗೆಟ್ಟ ಕೊಳಕು ರಸ್ತೆಯ ಮೇಲೆ ದಿನನಿತ್ಯ ನಮ್ಮ ಶಾಲಾ ಮಕ್ಕಳು ವಯೋ ವೃದ್ಧರು ಓಡಾಡುತ್ತಿದ್ದರು. ಸೂಕ್ತ ವ್ಯವಸ್ಥೆ ಕಲ್ಪಿಸದೆ ಕಣ್ಮುಚ್ಚಿ ಕುಳಿತಿದ್ದಾರೆ.
ಇ- ಸ್ವತ್ತುಗಳಿಗೆ ಮಾತ್ರ ಸೀಮಿತಗೊಂಡು ಗ್ರಾಮಕ್ಕೆ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಚಿಂತಿಸದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಡೆಂಗ್ಯೂ,ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ತಡೆಗಟ್ಟಲು ರಾಜ್ಯ ಸರ್ಕಾರ ಪ್ರತಿ ಗ್ರಾಮಗಳಲ್ಲೂ ಜಾಗೃತಿ ಮೂಡಿಸಬೇಕು ಎಂದು ಸುತ್ತೋಲೆ ಹೊರಡಿಸಿದರು. ಮಾಕವಳ್ಳಿ ಗ್ರಾ.ಪಂ ವತಿಯಿಂದ ನಮ್ಮ ಗ್ರಾಮದಲ್ಲಿ ಇದುವರೆಗೂ ಒಂದು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳದೆ ನಮ್ಮ ಜೀವಗಳ ಜೊತೆ ಚೆಲ್ಲಾಟವಾಡುತ್ತಿರುವ ಸ್ಥಳೀಯ ಪಿಡಿಓ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕು. ಹದಗೆಟ್ಟ ರಸ್ತೆಯಿಂದ ನರಕ ಅನುಭವಿಸುತ್ತಿರುವ ನಮಗೆ ಶೀಘ್ರವೇ ಸೂಕ್ತ ರಸ್ತೆ ಕಲ್ಪಿಸಿ ಕೊಡಿ ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಯಶೋದಮ್ಮ ಕೃಷ್ಣೇಗೌಡ ನಮ್ಮ ಗ್ರಾಮದಲ್ಲಿ ಬರಿ ಮಳೆಗಾಲದಲಲ್ಲ ಬೇಸಿಗೆಗಾಲದಲ್ಲೂ ಇಂತಹ ಹದಗೆಟ್ಟ ರಸ್ತೆಯ ಮೇಲೆ ಪ್ರತಿನಿತ್ಯ ನಾವು ನಡೆದಾಡುವ ಸಂದರ್ಭದಲ್ಲಿ ಹಲವು ಬಾರಿ ಕಾಲು ಜಾರಿ ಬಿದ್ದಿದ್ದೇವೆ.ಅದಲ್ಲದೆ ಕೆ.ಆರ್ ಪೇಟೆ ಪಟ್ಟಣದಿಂದ ಹಾಗೂ ಮಾಕವಳ್ಳಿ ಮಾರ್ಗವಾಗಿ ನಮ್ಮ ಗ್ರಾಮಕ್ಕೆ ಕಲ್ಪಿಸುವ ಎರಡು ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಯಂತೆ ಮಾರ್ಪಟ್ಟು ಹದಗೆಟ್ಟಿದೆ ಮೂಲ ಸೌಕರ್ಯದಿಂದಲೂ ವಂಚಿತರಾಗಿದ್ದೇವೆ.ಈ ಅವ್ಯವಸ್ಥೆಯಿಂದ ನಮ್ಮ ಆರೋಗ್ಯದ ಮೇಲೆ ಹಾಗೂ ಮುಂದಿನ ಪೀಳಿಗೆಯ ಮಕ್ಕಳ ಮೇಲೂ ಗಂಭೀರ ಪರಿಣಾಮ ಬೀಳುತ್ತಿದ್ದರು ನಮಗೆ ಸಂಬಂಧವಿಲ್ಲದ ರೀತಿ ಕೂತಿರುವ ಅಧಿಕಾರಿಗಳಿಗೆ ನಮ್ಮ ಗೋಳು ಅಧಿಕಾರಿಗಳಿಗೂ ತಟ್ಟಲಿ ಎಂದು ಹಿಡಿ ಶಾಪಹಾಕಿ ಕಂಬನಿ ಮಿಡಿಯುತ್ತ ತಮ್ಮ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಂದ್ರೇಗೌಡ, ದಿನೇಶ್, ಪಾಪೇಗೌಡ, ಶೇಖರ್, ಶಂಕರ್,ಗುಂಡೇಗೌಡ, ರತ್ನಮ್ಮ, ನಾಗಮ್ಮ, ತಾಯಮ್ಮ, ಜಯಂತಿ, ಪ್ರಸನ್ನ, ಸುನಿಲ್ , ಗೀತಾ, ಗೋಪಾಲೆಗೌಡ, ರಮೇಶ್, ದೇವರಾಜು, ಮಹೇಶ್,ಮಂಜು ,ರೇಣುಕಾ, ಕೃಷ್ಣ,ನಂಜುಡ ನಾಯ್ಕ, ದೇವರಾಜು,ಯುವ ಮುಖಂಡ ಅಜಯ್, ರಕ್ಷಿತ್, ಯೋಗೇಶ್,ಪ್ರಸನ್ನ ಮಹೇಶ್,ಸೇರಿದಂತೆ ಉಪಸ್ಥಿತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*