ಚಿರತೆ ದಾಳಿ: 13 ಮೇಕೆ ಕುರಿ ಬಲಿ
ನಾಗಮಂಗಲ: ತಡರಾತ್ರಿ ಚಿರತೆಯೊಂದು ದಾಳಿ ಮಾಡಿರುವ ಪರಿಣಾಮ ಕೊಟ್ಟಿಗೆಯಲ್ಲಿದ್ದ 13 ಕುರಿ ಮೇಕೆಗಳು ಸಾವನ್ನಪ್ಪಿದ್ದು ಸಂಕಷ್ಟಕ್ಕೆ ಸಿಲುಕಿದೆ ರೈತ ಕುಟುಂಬ ಗೋಳಾಡಿರುವ ಘಟನೆ ತಾಲ್ಲೂಕಿನ ಹರಳಕೆರೆ ಗ್ರಾಮದಲ್ಲಿ ನಡೆದಿದೆ.
ಹರಹಕೆರೆ ಗ್ರಾಮದ ರೈತ ಗೋಪಾಲಕೃಷ್ಣ ಎಂಬುವರಿಗೆ ಸೇರಿದ ಕುರಿ ಮೇಕೆ ಕೊಟ್ಟಿಗೆ ಗೆ ಚಿರತೆ ನುಗ್ಗಿ ಸರಿಸುಮಾರು ಲಕ್ಷರೂವರೆಗೆ ಹಾನಿ ಮಾಡಿದೆ ಎಂದು ಶಂಕಿಸಲಾಗಿದೆ.
ಗ್ರಾಮದ ಹೊರಭಾಗದಲ್ಲಿರುವ ಜಮೀನು ಬಳಿಯ ಕೊಟ್ಟಿಗೆಗೆ ಬುಧವಾರ ತಡರಾತ್ರಿ ನುಗ್ಗಿರುವ ಚಿರತೆ 7 ಮೇಕೆ 6 ಕುರಿಗಳಗಳ ಮೇಲೆ ದಾಳಿ ನಡೆಸಿ ರಕ್ತ ಕುಡಿದಿದೆ ಅಲ್ಲದೆ ಅರೆ ಬರೆ ತಿಂದು ಪರಾರಿಯಾಗಿದೆ.
ಬೆಳಿಗ್ಗೆ ಎಂದಿನಂತೆ ಕುಟುಂಬಸ್ಥರು ಕೊಟ್ಟಿಗೆ ಬಳಿ ಬಂದು ನೋಡಲಾಗಿ ಘಟನೆ ಬೆಳಕಿಗೆ ಬಂದಿದ್ದು ಸಾವನ್ನಪ್ಪಿರುವ ಕುರಿ ಮೇಕೆಗಳ ದೃಶ್ಯ ಕಂಡು ಕುಟುಂಬದ ಮಹಿಳೆ ಗೋಳಾಡಿದ್ದಾಳೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು. ಸ್ಥಳಕ್ಕೆ ಆಗಮಿಸಿ ಚಿರತೆ ಹೆಜ್ಜೆ ಗುರುತು ಪರಿಶೀಲನೆ ನಡೆಸಿದ್ದು. ಮುಂದಿನ ಕ್ರಮ ಕೈಗೊಂಡಿದ್ದಾರೆ.