ಮಂಡ್ಯ. ಮೇ:೧೬. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಒತ್ತಾಯ ಮಾಡಿದರು.
ಕರ್ನಾಟಕ ಕಂಡ ಪ್ರಬುದ್ಧ ಮತ್ತು ಹಿರಿಯ ರಾಜಕಾರಣಿ ಡಿ.ಕೆ.ಶಿವಕುಮಾರ್ ಅವರು ಒಬ್ಬ ಒಕ್ಕಲಿಗ ಜನಾಂಗದ ಪ್ರಭಾವಿ ಮತ್ತು ಕಾಂಗ್ರೆಸ್ ಪಕ್ಷದ ದಕ್ಷ ಮತ್ತು ನಿಷ್ಠಾವಂತ ರಾಜಕಾರಣಿ. ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಎಲ್ಲಾ ಜನಾಂಗದವರ ಮನಗೆದ್ದು ಪಕ್ಷಾತೀತವಾಗಿ ಇಡೀ ರಾಜ್ಯಾದ್ಯಂತ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತನ್ನ ಶಕ್ತಿ ಮೀರಿ ಹೋರಾಟ ಕೊಟ್ಟಿರುತ್ತಾರೆ. ಹೀಗಾಗಿ ಅವರನ್ನು ಸಿಎಂ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹಾಗೆಯೇ ಈ ಹಿಂದೆಯೂ ಹಲವಾರು ಬಾರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ಮತ್ತು ಕೀರ್ತಿ ತಂದು ಕೊಟ್ಟು ಅನುಭವವುಳ್ಳರಾಗಿರುತ್ತಾರೆ. ಇಡೀ ರಾಜ್ಯದ ಜನತೆ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಆಶಾ ಮನೋಭಾವನೆ ಹೊಂದಿರುತ್ತಾರೆ ಎಂದರು.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮರ್ ಅವರ ಪಾತ್ರ ಮಹತ್ತರವಾಗಿದೆ. ಕಾಂಗ್ರೆಸ್ 135 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕಾರಣಕರ್ತರು. ಮಂಡ್ಯ ಜಿಲ್ಲೆಯಲ್ಲೂ 6 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಹೀಗಾಗಿ ಅವರನ್ನು ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಹಲವಾರು ವರ್ಷಗಳಿಂದ ಒಕ್ಕಲಿಗರು ಕಾಂಗ್ರೆಸ್ ನಲ್ಲಿ ಸಿಎಂ ಅಗಿಲ್ಲ. ಸಿದ್ದರಾಮಯ್ಯ ಆಗಬಾರದು ಎಂಬುದು ನಮ್ಮ ವಾದವಲ್ಲ, ಈ ಹಿಂದೆ ಅವರೊಮ್ಮೆ ಸಿಎಂ ಆಗಿದ್ದರು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸಿದರು.
ಡಿ.ಕೆ.ಶಿವಕುಮಾರ್ ರಾಜ್ಯವಲ್ಲದೇ
ಮೈಸೂರು, ಮಂಡ್ಯ ಒಕ್ಕಲಿಗರ ಪ್ರಭಾವಿ ನಾಯಕರಾಗಿದ್ದು ನಮ್ಮ ಜಿಲ್ಲಾ ಒಕ್ಕಲಿಗರ ಸಂಘ (ರಿ.) ಮಂಡ್ಯ ಮತ್ತು ಎಲ್ಲಾ ಮಂಡ್ಯ ಜಿಲ್ಲೆಯ ಜನಾಂಗದ ಪರವಾಗಿ ಈ ಬಾರಿ ಡಿ.ಕೆ.ಶಿವಕುಮಾರ್ ರವರನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ನಿಂಗರಾಜು, ಮುಖಂಡರಾದ ಎಸ್.ಕೆಂಪರಾಜು, ಯೋಗೇಶ್, ಅಜಯಕುಮಾರ್, ಯೋಗಣ್ಣ ಇತರರಿದ್ದರು.