ಗುರುಪ್ರಸಾದ್ ಕೆರಗೋಡು ವಿರುದ್ದ ತಿರುಗಿಬಿದ್ದ ಮಳವಳ್ಳಿ ಮಾಜೀ ಶಾಸಕರು
ದಲಿತ ಸಂಘಟನೆಯ ನಾಯಕ ಗುರುಪ್ರಸಾದ್ ಕೆರಗೋಡುರವರು
ತಮ್ಮ ಪತ್ನಿಯನ್ನು ಜಿಪಂ ನಲ್ಲಿ ಗೆಲ್ಲಿಸಲಾಗದವರು ಇಡೀ ಜಿಲ್ಲೆಯಲ್ಲಿ ಕುಮಾರಸ್ವಾಮಿ ವಿರುದ್ದ ಮತ ಚಲಾಯಿಸಲು ಕರೆ ನೀಡುತ್ತಿರಲ್ಲ ನಿಮಗೆ ಯಾವ ನೈತಿಕತೆ ಇದೆ ಎಂದು ಮಳವಳ್ಳಿ ಮಾಜೀ ಶಾಸಕ ಅನ್ನದಾನಿ ಪ್ರಶ್ನಿಸಿದರು.ದಸಂಸ ನಾಯಕ ಗುರುಪ್ರಸಾದ್ ಕೆರಗೋಡುರವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಯನ್ನು ಸೋಲಿಸಲು ಕರೆ ನೀಡಿರುವುದನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ರಿಯಿಸಿದ ಅವರು.
ನಿಮ್ಮನ್ನು ನಮ್ಮ ಸಮಾಜದ ನಾಯಕರು ಎಂದುಕೊಂಡಿದ್ದೆವೆ ಹೊರತು ಪಕ್ಷದ ನಾಯಕರು ಎಂದಲ್ಲ.ಯಾವ ಯಾವ ಪಕ್ಷಕ್ಕೆ ಯಾವ ಸಂಧರ್ಭದಲ್ಲಿ ಬೆಂಬಲಿಸಿದ್ದಿರಿ ಎಂಬ ಮಾಹಿತಿ ನಮ್ಮ ಬಳಿ ಇದೆ.ನಾನು ಶಾಸಕನಾಗಿರದಿದ್ದರೆ ನಾನು ನಿಮಗಿಂತ ಬಹುದೊಡ್ಡ ಸಂಘಟನಾ ನಾಯಕನಾಗಿರುತ್ತಿದ್ದೆ.ಮಂಡ್ಯ ಜಿಲ್ಲೆಯಲ್ಲಿ ವೆಂಕಟಗಿರಿಯಯ್ಯ ಚಂದ್ರ ಪ್ರಸಾದ್ ತ್ಯಾಗಿ ಸೇರಿದಂತೆ ಹಲವರು ದಲಿತ ಸಂಘಟನೆ ಕಟ್ಟಿದ್ದಾರೆ.
ಇದರ ಅರಿವು ನಿಮಗಿರಲಿ.ಮೊದಲು ನಿಮ್ಮ ಧರ್ಮಪತ್ನಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿ ಆನಂತರ ಕುಮಾರಸ್ವಾಮಿ ಸೋಲಿಸುವ ಬಗ್ಗೆ ಯೋಚಿಸಿ ಎಂದರು.
ನಾನೊಬ್ಬ ಬಡವ ನನ್ನ ಬಳಿ ಶಾಲಾ ದಾಖಲಾತಿ ಬಿಟ್ಟು ಬೇರೆನು ಇರಲಿಲ್ಲ.ನನ್ನಂಥವನನ್ಮು ಎರಡು ಬಾರಿ ಶಾಸಕ ಮಾಡಿದ್ದು ಜನತಾದಳ.ಅಲ್ಪಸಂಖ್ಯಾತರನ್ನು ಬಿಜೆಪಿ ಜೆಡಿಎಸ್ ಮೇಲೆ ಎತ್ತಿಕಟ್ಟುತ್ತಿರುವ ನೀವು ಮೊದಲು ಕೋಮುವಾದಿಗಳು ಎಂದು ಜರಿದರು.
ಜ್ಯಾದಳ ಬಿಜೆಪಿ ಅಭ್ಯರ್ಥಿಗಳಿಗೆ ಮತ ಕೊಡಬೇಕು ಎಂದು ಅನ್ನದಾನಿ ಮನವಿ ಮಾಡಿದರು