*ಲೋಕಾಯುಕ್ತ ದಾಳಿ: ಅಬಕಾರಿ ಇನ್ಸ್ಪೆಕ್ಟರ್ ಗೀತಾ ಪರಾರಿ:ಪೇದೆ ದೇವರಾಜ್ ಸೆರೆ
ನಾಗಮಂಗಲ.ತಾಲೂಕಿನ ಮಣ್ಣಹಳ್ಳಿ ಗ್ರಾಮದ ದೇವರಾಜು ಎಂಬವವರ ಜಮೀನಿನಲ್ಲಿ ಗಾಂಜಾ ಬೆಳೆದ ಪ್ರಕರಣದಲ್ಲಿ ಸುರೇಶ ಎಂಬ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಈ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಿದ್ದರು
ಈ ಸಂಬಂಧ ಜಾಮೀನಿನ ಮೇಲೆ ಹೊರಬಂದಿದ್ದ ಸುರೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ವ್ಯಕ್ತಿಯಾದಂತಹ ದೇವರಾಜು ಅವರ ಹೆಸರು ಕೈಬಿಡಲು ನಾಗಮಂಗಲ ಅಬಕಾರಿ ಇನ್ಸ್ಪೆಕ್ಟರ್ ಗೀತಾ ರವರು 20000 ಲಂಚದ ಹಣ ನೀಡುವಂತೆ ಒತ್ತಡ ಹೇರಿದ್ದರು. ಈ ವಿಚಾರವಾಗಿ ಸುರೇಶರಿಂದ ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು
ದೂರುದಾರ ಸುರೇಶ್ ಬಳಿ ಹತ್ತು ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ಪೇದೆ ಸುರೇಶ್ ಲೋಕಾಯುಕ್ತಕ್ಕೆ ಸೆರೆಯಾಗಿದ್ದಾರೆ
ಲಂಚದ ಹಣವನ್ನು ನೀಡಲು ನಾಗಮಂಗಲ ಅಬಕಾರಿ ಇಲಾಖೆಗೆ ಬಂದ ಸುರೇಶ್ ಇನ್ಸ್ಪೆಕ್ಟರ್ ಗೀತಾ ರವರಿಗೆ ಫೋನ್ ಮಾಡಿದ್ದಾನೆ ಆ ಸಮಯದಲ್ಲಿ ಗೀತಾರವರು ತಮ್ಮ ಠಾಣೆಯ ಪೇದೆ ದೇವರಾಜ್ ಬಳಿ ಹಣ ನೀಡುವಂತೆ ಸೂಚಿಸಿದ್ದಾರೆ ಸುರೇಶ್ ಎಂಬಾತನಿಂದ ಲಂಚ ಪಡೆಯುವಾಗ ಲೋಕಾಯುಕ್ತ
ದಾಳಿ ಮಾಡಿ ಪೇದೆ ದೇವರಾಜುನನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಅಬಕಾರಿ ಇನ್ಸ್ ಪೆಕ್ಟರ್ ಗೀತಾ ಪರಾರಿಯಾಗಿದ್ದಾರೆ.
ನಾಗಮಂಗಲ ಅಬಕಾರಿ ಇಲಾಖೆಯಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ಅಬಕಾರಿ ಇಲಾಖೆಯ ಕಡತಗಳನ್ನು ತಪಾಸಣೆ ಮಾಡಿರುವ ಘಟನೆ ಶುಕ್ರವಾರ ಸಂಜೆ 5:00 ಗಂಟೆಯಲ್ಲಿ ನಡೆದಿದೆ