ಬಿಜೆಪಿ ಕಚೇರಿಯಲ್ಲಿ ಕಣ್ಣೀರು ಹಾಕಿದ ಶಿವರಾಮೇಗೌಡ
ನಾಗಮಂಗಲ:ಎ..೧೩. ಶಾಸಕ ಸ್ಥಾನದ ಅಧಿಕಾರ ಕಳೆದುಕೊಂಡು 25 ವರ್ಷಗಳೆ ಆಗಿದೆ ಆದರೂ ನನ್ನ ಬೆಂಬಲಿಗರನ್ನ ಕಳೆದುಕೊಂಡಿಲ್ಲ ಪಕ್ಷದ ಕಾರ್ಯಕರ್ತರಿಗೆ ಕಿಂಚಿತ್ತೂ ತೊಂದರೆ ಆಗದಂತೆ ನೋಡಿಕೊಳ್ಳುವೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ನಾಗಮಂಗಲ ಬಿಜೆಪಿ ಕಚೇರಿಯಲ್ಲಿ ಕಣ್ಣೀರಿಟ್ಟು ಗೋಳಾಡಿದ್ದಾರೆ.
ಪತ್ನಿ ಸುಧಾ ಶಿವರಾಮೇಗೌಡಗೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ನಂತರ ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ಕೊಟ್ಟು ಕಾರ್ಯಕರ್ತರ ಕುರಿತು ಮಾತನಾಡುವ ವೇಳೆ ಅವರು ತಮ್ಮ ರಾಜಕೀಯ ಸ್ಥಿತಿಗತಿ ನೆನೆದು ಗೋಳಾಡಿದ್ದಾರೆ
ಬಿಜೆಪಿಯಲ್ಲೇ ಅಳಿವು ಉಳಿವು
ನನ್ನದು ನೋವಿನ ಕಣ್ಣೀರು ಎಂಬುದಕ್ಕಿಂತ ಹೆಚ್ಚಾಗಿ ಆನಂದಕ್ಕೆ ಕಣ್ಣೀರು ಎಂದು ಕೊಳ್ಳಿ ನನಗೆ ಮೋಸ ಧಗಾ ಗೊತ್ತಿಲ್ಲ, ನನ್ನ ರಾಜಕೀಯ ಅಳಿವು ಉಳಿವು ಬಿಜೆಪಿ ಪಕ್ಷದಲ್ಲೇ ಎಂದು ನಾನು ಇಲ್ಲಿ ಪ್ರಮಾಣಿಕರಿಸುತ್ತೇನೆ ನಿಮ್ಮ ಪ್ರೀತಿ ಅಭಿಮಾನ ನಾನು ಋಣಿ ಎಂದು ಪಕ್ಷದ ಮೂಲ ಕಾರ್ಯಕರ್ತರ ಅಭಿನಂದಿಸಿದ್ದಾರೆ.
ಈ ವೇಳೆ ಪಕ್ಷದ ಚುನಾವಣಾ ಉಸ್ತುವಾರಿ ಮಾರುತಿ ಪವಾರ್, ತಾಲ್ಲೂಕು ಅಧ್ಯಕ್ಷ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ ತೊಳಲಿ ಕೃಷ್ಣ ಮೂರ್ತಿ, ಸಿದ್ದಲಿಂಗಸ್ವಾಮಿ, ವಿನೋದ್ ಕುಮಾರ್ ಇತರರು ಉಪಸ್ಥಿತರಿದ್ದರು