ಮಾಜಿ ಶಾಸಕ ಪುಟ್ಟರಾಜು ಅವರಿಂದ ಸಂವಿಧಾನ ವಿರೋಧಿ ಹೇಳಿಕೆ
ಬಹಿರಂಗ ಕ್ಷಮೆ ಯಾಚನೆಗೆ ಆಗ್ರಹ
ಮಂಡ್ಯ:ಮೇ:18 ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಕ್ಷೇತ್ರದ ಮತದಾರರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇಗೌಡ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ನಂತರ ಸಿ.ಎಸ್.ಪುಟ್ಟರಾಜು ಅವರು ತಮಗೆ 82 ಸಾವಿರ ಮತಗಳು ಬಂದಿದ್ದು, ಅವು ಅಪ್ಪನಿಗೆ ಹುಟ್ಟಿದ ಮತಗಳು ಎಂದು ಹೇಳುವ ಮೂಲಕ ಕ್ಷೇತ್ರದ ಮತದಾರನ್ನು ಅವಮಾನಿಸಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ತಿರಸ್ಕರಿಸುವ ಇಂತಹ ಸಂವಿಧಾನ ವಿರೋಧಿ ಮನಸ್ಥಿತಿಯ ಹೇಳಿಕೆಯನ್ನ ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಸಿ.ಎನ್.ಪುಟ್ಟರಾಜು ಹೇಳಿಕೆ ಕ್ಷೇತ್ರದಾದ್ಯಂತ ಮತದಾರರಲ್ಲಿ ತೀವ್ರ ಪ್ರತಿರೋಧದ ಅಲೆ ಎಬ್ಬಿಸಿದೆ, ಗ್ರಾಮೀಣ ಜನ ಸಮುದಾಯದಲ್ಲಿ ಅನಗತ್ಯ ಘರ್ಷಣೆಗೆ ಎಡ ಮಾಡಿ ಕೊಡುವ ಸಾದ್ಯತೆಗಳು ಕಂಡು ಬರುತ್ತಿವೆ. ಈ ಉದ್ರಿಕ್ತ ಮನಸ್ಥಿತಿಯ ವಾತಾವರಣವನ್ನು ತಿಳಿಗೊಳಿಸಲು ಶಾಂತಿಯುತ ಪ್ರಜಾಪ್ರಭುತ್ವ ಮಾದರಿಯ ಪ್ರತಿಭಟನೆಗಾಗಿ ಕ್ಷೇತ್ರದ ಮತದಾರರು ಮುಂದಾಗುವ ಮೂಲಕ ಸಹಕರಿಸಬೇಕೆಂದು ಕೋರಿದರು.
ಮತದಾರ ಬಂಧುಗಳು ಪ್ರಚೋದನೆಗೆ ಒಳಗಾಗಿ ವೈಯಕ್ತಿಕ ಸಂಘರ್ಷಕ್ಕೆ ಎಡ ಕೊಡದೇ, ಶಾಂತಿಯುತ ಪ್ರಜಾಪ್ರಭುತ್ವ ರೀತಿಯಲ್ಲಿ ವರ್ತಿಸಬೇಕಿದೆ ಎಂದರು.
ಕ್ಷೇತ್ರದ ಮಯದಾರರು, ಸಿ.ಎಸ್. ಪುಟ್ಟರಾಜು ಅವರಿಗೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಆದರೂ ಅಂತಹದ್ದೇ ಪವೃತ್ತಿಯಲ್ಲಿ ಪುಟ್ಟರಾಜು ಮುಂದುವರೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೂಡ ಕ್ಷೇತ್ರದ ಜನರು ತಕ್ಕಪಾಠ ಕಲಿಸಬೇಕಾಗಿದೆ ಎಂದರು.
ಕ್ಷೇತ್ರದ ಮತದಾರರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಸಾಂವಿಧಾನಿಕ ನಡವಳಿಕೆಯನ್ನು ಎತ್ತಿ ಹಿಡಿಯುವ ಮೂಲಕ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳಿಸಲು ವಿವೇಕ ಯುತವಾಗಿ ವರ್ತಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಂಭುಲಿಂಗ ಉಪಸ್ಥಿತರಿದ್ದರು.