ಮೈಸೂರು-ಬೆಂಗಳೂರು ನಡುವೆ ನಿರ್ಮಾಣ ಗೊಂಡಿರುವ ಹೆದ್ದಾರಿಯಲ್ಲಿನ ಗಣಂಗೂರು ಬಳಿಯ ಟೊಲ್ ನಲ್ಲಿ ಜುಲೈ ಒಂದರಿಂದ ನಿಗದಿ ಪಡಿಸಿರುವ ದರಗಳು ಮಂಡ್ಯ ಜಿಲ್ಲೆಯ ಜನರ ಪಾಲಿಗೆ ಆಘಾತವನ್ನುಂಟು ಮಾಡಿದ್ದು ಹೆದ್ದಾರಿ ಸಂಚಾರದಿಂದ ಸ್ಥಳೀಯ ಜನರನ್ನು ವಂಚಿಸಲು ನಡೆಸಿರುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಟಿಎಸ್ ಸತ್ಯಾನಂದ ಆರೋಪಿಸಿದರು
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಭಾರತೀಯ ಹೆದ್ದಾರಿ ಪ್ರಾಧಿಕಾರ ಅವ್ಯಜ್ಞಾನಿಕವಾಗಿ ನಿಗದಿಪಡಿಸಿ ರುವ ದರಪಟ್ಟಿ ಗಮನಿಸಿದರೆ ಇದು ಟೊಲ್ ಸಂಗ್ರಹದ ಬದಲು ಜನರ ‘ಸುಲಿಗೆ ಕೇಂದ್ರ’ ವಾಗಿ ಬಡ ಮಧ್ಯಮ ವರ್ಗದ ಜನರ ಹಗಲು ದರೋಡೆ ಕೇಂದ್ರ ವಾಗುವುದರಲ್ಲಿ ಸಂಶಯವಿಲ್ಲ.
ಮೈಸೂರು ಬೆಂಗಳೂರು ಹೆದ್ದಾರಿ ಮೊದಲು ನಿರ್ಮಿಸಿದ ಮೈಸೂರು ರಾಜ ವಂಶಸ್ಥರು ಮತ್ತು ಅದನ್ನು ನಾಲ್ಕು ಪಥಾಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ ಈ ಭಾಗದ ಜನನಾಯಕರಾದ ಎಸ್ ಎಂ ಕೃಷ್ಣ ರವರು ಮೈಸೂರು ಬೆಂಗಳೂರು ನಗರಗಳ ಮದ್ಯದಲ್ಲಿನ ಜನರ ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸುಧಾರಿಸಿ ಸಮಾಜದ ಬೆಳವಣಿಗೆಗೆ ಕಾರಣರಾಗಿ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಮತ್ತು ಜೀವನ ರೂಪಿಸಲು ಕಾರಣರಾದರು. ಆದರೆ ಪ್ರಸುತ್ತುತ ಇದನ್ನು ದಶಪಥವಾಗಿ ನಿರ್ಮಿಸಿದ ಕೇಂದ್ರ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರ ಜನರ ಪಾಲಿಗೆ ಮರಣ ಶಾಸನ ಬರೆದು ಸಾರ್ವಜನಿಕರ ಹಣ ಲೂಟಿಗೆ ಮುಂದಾಗಿದ್ದು ಹಾಲಿ ದಶಪಥ ಕೇವಲ ಉಳ್ಳವರು ಮತ್ತು ಶ್ರೀಮಂತ ಐಷಾರಾಮಿ ಜನರ ಪಾಲಿಗಷ್ಟೆ ನಿರ್ಮಾಣ ವಾಗಿರುವ ರಸ್ತೆ ಎಂಬುದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರೂಪಿಸಿದೆ ಎಂದರು
ಸ್ಥಳೀಯ ಗ್ರಾಮಗಳು ಮತ್ತು ಪಟ್ಟಣದ ನಾಗರೀಕರು, ಕೈಗೋರಿಕೊದ್ಯಮಗಳು, ಪ್ರವಾಸಿ ತಾಣಗಳು, ರೈತರ ಉತ್ಪನ್ನ ಗಳ ಸಾಗಣಿಕೆ ಸೇರಿದಂತೆ ಸ್ಥಳೀಯವಾಗಿ ಸಂಚಾರಕ್ಕೆ ಯಾವುದೇ ಪರ್ಯಾಯ ಮಾರ್ಗ ನಿರ್ಮಿಸದೇ ಆಗಮನ ಮತ್ತು ನಿರ್ಗಮನ ಸ್ಥಳಗಳನ್ನು ವೈಜ್ಞಾನಿಕ ವಾಗಿ ಗುರುತಿಸದೆ, ಗ್ರಾಮಗಳ ಸಂಪರ್ಕಕ್ಕೆ ಸರಿಯಾದ ಅಂಡರ್‌ಪಾಸ್ ಸ್ಕೈವಾಕರ್ ಗಳನ್ನು ನಿರ್ಮಸದೆ ಸರ್ವೀಸ್ ರಸ್ತೆ ಗಳು ನಿರ್ಮಾಣ ಪೂರ್ಣ ಗೊಳ್ಳುವ ಮುನ್ನವೇ ಜನರ ಸುಲಿಗೆ ಮಾಡಲು ಟೊಲ್ ಸಂಗ್ರಹಕ್ಕೆ ಇಳಿದಿರುವುದು ನಾಚಿಕೆಗೇಡಿನ ಕ್ರಮ.
ಮಂಡ್ಯ ಮತ್ತು ರಾಮನಗರದ ನೂರಾರು ರೈತರು ಸಾವಿರಾರು ಜಮೀನು ಕಳೆದ ಕೊಂಡು ಅನಾಥರಾಗಿದ್ದು ಕುಟುಂಬದ ನಿರ್ವಹಣೆಗೆ ಗೂಳೆ ಹೋಗುವ ಪರಿಸ್ಥಿತಿ ಬಂದಿದೆ. ಅವರ ಆರ್ಥಿಕ ಮಟ್ಟ ಸುಧಾರಿಸಲು ಅನುವಾಗ ಬೇಕಿದ್ದ ಹೆದ್ದಾರಿ ಪ್ರಾಧಿಕಾರ ಸ್ಥಳೀಯರ ಸಂಚಾರಕ್ಕೆ ಸಂಚಕಾರ ತಂದು ಕೇವಲ ಕೆಲವೆ ಮಂದಿ ಉಳ್ಳವರ ಯಾತ್ರೆಗೆ ಸಾವಿರಾರು ಕೋಟಿ ರೂಪಾಯಿ ರಸ್ತ ನಿರ್ಮಿಸಿ ಸ್ಥಳೀಯರ ಬದುಕನ್ನು ಅದೋಗತಿಗೆ ಇಳಿಸಿದೆ.
ಈಗಾಗಲೇ ರಸ್ತೆಯ ಅವೈಜ್ಞಾನಿಕ ನಿರ್ಮಾಣದಿಂದ ದಿನಂಪ್ರತಿ ಹಲವಾರು ಜನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು ಹೆದ್ದಾರಿಯಲ್ಲಿನ ಅಪಘಾತ ಗಳ ಸರಾಸರಿ ಐವತ್ತು ಪಟ್ಟು ಹೆಜ್ಜಾಗಿ ಕೇವಲ ಆರು ತಿಂಗಳಲ್ಲಿ ಮೂನ್ನುರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ರೋಡ್ ಕಾಂಗ್ರೆಸ್ (ಐಆರ್ ಸಿ) ನಿಯಮವಾಳಿಗಳ ಅನ್ವಯ ನಿರ್ಮಾಣವಾಗ ಬೇಕಾಗಿದ್ದ ಹೆದ್ದಾರಿ ಎಲ್ಲಾ ನಿಯಮವಾಳಿಗಳನ್ನು ಗಾಳಿಗೆ ತೂರಿ ಕೆಲವು ಸ್ವ ಹಿತಾಸಕ್ತಿ ವ್ಯಕ್ತಿಗಳ ಮಧ್ಯ ಪ್ರವೇಶ ದಿಂದ ಹಲವು ಅವಾಂತರಗಳಿಗೆ ಹೆದ್ದಾರಿ ಕಾರಣವಾಗಿದೆ.
ನೂತನ ಹೆದ್ದಾರಿ ಯಿಂದ ರಸ್ತೆ ಮಧ್ಯದ ಪಟ್ಟಣಗಳ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಹಾಳಗಿದ್ದು ಈ ಹಿಂದಿನ ಹೆದ್ದಾರಿ ಅಕ್ಕಪಕ್ಕದ ಸಾವಿರಾರು ಯುವಕರ ಅಂಗಡಿಗಳು ನಾಶವಾಗಿ ಕಟ್ಟಿಕೊಂಡಿದ್ದ ಬದುಕು ಸರ್ವನಾಶವಾಗಿದೆ. ಇಂತಹ ಸಂಧರ್ಭದಲ್ಲಿ ಟೊಲ್ ಸಂಗ್ರಹದ ನೆಪದಲ್ಲಿ ಕೇವಲ ನಲವತ್ತು ಕಿ.ಮೀಟರ್ ದೂರದ ಮೈಸೂರಿಗೆ ಮಂಡ್ಯ ಜಿಲ್ಲೆಯ ವಾಹನಗಳಿಗೆ 155 ರೂಗಳ ಹಣ ನಿಗದಿ ಪಡಿಸಿರುವುದರ ಹಿಂದೆ ಈ ಭಾಗದ ಜನರನ್ನು ರಸ್ತೆಯ ಬಳಕೆಯಿಂದ ಹಿಂದೆ ಸರಿಯುವಂತೆ ಮಾಡುವ ಹುನ್ನಾರವಾಗಿದೆ.
ಕೂಗುಮರಿ ಪ್ರತಾಪ್ ಸಿಂಹ ರವರು ಮಂಡ್ಯ ಜಿಲ್ಲೆಯ ಜನರ ಪಾಲಿಗೆ ಒಬ್ಬ ದೊಡ್ಡ ಕಳಾನಾಯಕರಾಗಿದ್ದು ತಮ್ಮ ವ್ಯಾಪ್ತಿ ಮೀರಿ ಹೆದ್ದಾರಿ ಪ್ರಾಧಿಕಾರ ವನ್ನು ದಿಕ್ಕುತಪ್ಪಿಸಿ ತಾವೊಬ್ಬ ಮಹನ್ ಅಭಿವೃದ್ಧಿ ಹರಿಕಾರ ಎಂಬಂತೆ ಬಿಂಬಿಸಿಕೊಂಡು ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಜನರನ್ನು ಹೆದ್ದಾರಿ ಸಂಚಾರದಿಂದ ವಿಮುಖರನ್ನಾಗಿಸಿ ಜನರ ಬದುಕಿಗೆ ಆರ್ಥಿಕ ವಹಿವಾಟು ಗಳಿಗೆ ಹೊಡೆತ ನೀಡಿ ಅವರನ್ನು ಬೀದಿಗೆ ತಳ್ಳಿದ ಕೀರ್ತಿಗೆ ಭಾಜನರಾಗಿದ್ದಾರೆ.
ಹಿಂದೆ ಆಡಳಿತ ನಡೆಸಿದ ಯಾವೊಬ್ಬ ಜನಪ್ರತಿನಿಧಿ ಅಥವಾ ಮೈಸೂರು ಸಂಸ್ಥಾನದ ಮಹರಾಜರುಗಳು ಇಂತಹ ಜನವಿರೋದಿ ಕೃತ್ಯ ಎಸಗಿರಲಿಲ್ಲ ಆದರೆ ಪ್ರತಾಪ್ ಸಿಂಹ ರವರು ತಮ್ಮ ವ್ಯಾಪ್ತಿ ಮೀರಿ ಸಾವಿರಾರು ಜನರ ಬದುಕಿನ ನಾಶಕ್ಕೆ ಕಾರಣರಾಗಿ ಒಬ್ಬ ಜನದ್ರೋಹಿ ನಾಯಕ ತಾವು ಎಂಬುದನ್ನು ನಿರೂಪಿಸಿದ್ದಾರೆ.
ಸಾವಿರಾರು ಎಕರೆ ಜಮೀನನ್ನು ರಸ್ತೆಯ ನಿರ್ಮಾಣಕ್ಕೆ ನೀಡಿದ ಜಿಲ್ಲೆಯ ಜನರನ್ನು ಸದರಿ ಹೆದ್ದಾರಿಯಲ್ಲಿ ಸಂಚಾರಿಸದಂತೆ ಮಾಡುವ ಇಂತಹ ಹುನ್ನಾರಗಳನ್ನು ಮಂಡ್ಯ ಜಿಲ್ಲೆಯ ಜನ ಸಹಿಸುವುದಿಲ್ಲ. ಅವ್ಯಾಜ್ಞಾನಿಕ ಟೊಲ್ ಗಳನ್ನು ಕಿತ್ತು ಒಗೆದು ಅಧಿಕಾರಸ್ಥರಿಗೆ ಬುದ್ದಿ ಕಲಿಸುವ ತಾಕತ್ತು ಮಂಡ್ಯ ಜಿಲ್ಲೆಯ ಜನರಿಗೆದೆ.
ಈ ಕೂಡಲೇ ಹೆದ್ದಾರಿ ಪ್ರಾಧಿಕಾರ ಅವ್ಯಾಜ್ಞಾನಿಕ ದರಗಳನ್ನು ವಾಪಸ್ ಪಡೆಯಬೇಕು. ಸ್ಥಳೀಯ ವಾಸಿಗಳಿಗೆ, ಜಮೀನು ಕಳೆದುಕೊಂಡವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಮುಖ್ಯರಸ್ತೆ ಮತ್ತು ಸರ್ವೀಸ್ ರಸ್ತೇಗಳ ನಿರ್ಮಾಣ ಕಾರ್ಯ ಮುಗಿಯುವ ವರೆಗೆ ಯಾವುದೇ ಟೊಲ್ ಸಂಗ್ರಹ ನಡೆಸ ಕೂಡದು ಎಂದು ಆಗ್ರಹಿಸುತ್ತೆನೆ.
ಇಲ್ಲವಾದಲ್ಲಿ ಮಂಡ್ಯ ಜಿಲ್ಲೆಯ ಜನ ದಂಗೆ ಎದ್ದು ರಸ್ತೆ ವಶಪಡಿಸಿಕೊಂಡು ಟೊಲ್ ಕೇಂದ್ರ ಗಳನ್ನು ಕಿತ್ತು ಹೊಗೆಯಲ್ಲಿದ್ದಾರೆ. ಅಗತ್ಯ ಬಿದ್ದಾರೆ ಜಿಲ್ಲೆಯ ಜನರ ಹಿತದೃಷ್ಟಿಯಿಂದ ನ್ಯಾಯಾಲಯದ ಬಾಗಿಲು ಬಡಿದು ಇಂತಹ ಜನವಿರೋದಿ ನಿರ್ಧಾರವನ್ನು ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದರು.
block