ಮಂಡ್ಯ ಕೈ ಅಭ್ಯರ್ಥಿಯಾಗಿ ರವಿಕುಮಾರ್. ಪೇಮೆಂಟ್ ಖೋಟಕ್ಕೆ ನಕ್ಕೋರೆ ಎಂದ ಹೈಕಮಾಂಡ್
ಮಂಡ್ಯ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಗಣಿಗ ರವಿಕುಮಾರ್ ರನ್ನು ಘೋಷಿಸುವುದರೊಂದಿಗೆ ಕದನ ಕುತೂಹಲಕ್ಕೆ ತೆರೆಬಿದ್ದಿದೆ.ಇನ್ನು ಬಿಜೆಪಿ ತನ್ನ ಹುರಿಯಾಳಾಗಿ ಅಶೋಕ್ ಜಯರಾಂ ರನ್ನು ಘೋಷಿಸುವುದು ನಿಚ್ಚಳವಾಗಿದೆ.ಜ್ಯಾದಳ ಈಗಾಗಲೇ ತನ್ನ ಹುರಿಯಾಳಾಗಿ ಹಾಲೀ ಶಾಸಕ ಎಂ.ಶ್ರೀನಿವಾಸ್ ರನ್ನು ಘೋಷಿಸಿದ್ದರು ಕಡೇ ಗಳಿಗೆಯಲ್ಲಿ ಅಭ್ಯರ್ಥಿ ಬದಲಾಗುವ ನಿರೀಕ್ಷೆ ಅಲ್ಲಿನ ಇನ್ನುಳಿದ ಅಕಾಂಕ್ಷೀಗಳದ್ದು.ಇತ್ತ ಕಾಂಗ್ರೆಸ್ ಪಕ್ಷ ಗಣಿಗ ರವಿಕುಮಾರ್ ರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಟಿಕೇಟ್ ಗಾಗಿ ಪ್ರಬಲ ಅಕಾಂಕ್ಷಿಗಳಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಡಾಕ್ಟರ್ ಕೃಷ್ಣ ಹಾಗೂ ಗುತ್ತಿಗೆದಾರ ಕೀಲಾರ ರಾಧಕೃಷ್ಣ ಇಬ್ಬರಿಗೂ ಎರಡು ಹೊಲ ಕಾದು ಏನು ದಕ್ಕದ ಪರಿಸ್ಥಿತಿ ಸೃಷ್ಡಿಯಾಗಿದೆ.
ಮೂಲತಃ ಜ್ಯಾದಳದ ಡಾಕ್ಟರ್ ಕೃಷ್ಣ ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದರು ಕೀಲಾರ ರಾಧಕೃಷ್ಣ ಮೊದಮೊದಲು ಬಿಜೆಪಿ ಪಾಳೆಯದಲ್ಲಿದ್ದರು ನಂತರ ಜ್ಯಾದಳಕ್ಕೆ ಹಾರಿ ಕಡೇ ಗಳಿಗೆಯಲ್ಲಿ ಟಿಕೇಟ್ ದಕ್ಕುವುದಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿ ಟಿಕೇಟ್ ಗಾಗಿ ಹರಸಾಹಸ ಮಾಡಿದ್ದರು.ಇದಕ್ಕಾಗಿ ತಮ್ಮದೆ ಖರ್ಚಿನಲ್ಲಿ ಪಕ್ಷದ ಕಚೇರಿಯನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದರು.ಅಂತಿಮವಾಗಿ ಪಕ್ಷದ ಹೈಕಮಾಂಡ್ ಮೆರಿಟ್ ಅಭ್ಯರ್ಥಿಗೆ ಅವಕಾಶ ನೀಡಿದ್ದು ಪೇಮೆಂಟ್ ಖೋಟಾದ ಅಭ್ಯರ್ಥಿಗಳಿಗೆ ನಖ್ಖೋರೆ ಎಂದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜ್ಯಾದಳದ ಎದುರು ಕೈ ಅಭ್ಯರ್ಥಿಯಾಗಿ ಸೆಣಸಿ ಎರಡನೇ ಸ್ಥಾನಕ್ಕೆ ತಲುಪಿದ್ದ ರವಿಕುಮಾರ್ ಇದ್ದುದ್ದರಲ್ಲಿ ಜನರಿಗೆ ಹತ್ತಿರ ಇದ್ದವರು.ಕರೋನಾ ಸಂಧರ್ಭದಲ್ಲಿ ಪುಡ್ ಕಿಟ್ ಇತ್ಯಾದಿ ಹಂಚಿ ಚಾಲ್ತಿಯಲ್ಲಿದ್ದವರು.ಕಳೆದ ಚುನಾವಣೆ ಸೋಲಿನ ಅನುಕಂಪ ಅನುಭವ ರಾಜ್ಯದಲ್ಲಿ ಎದ್ದಿರುವ ಕಾಂಗ್ರೆಸ್ ಅಲೆ ಅವರನ್ನು ವಿ಼ಧಾನಸಭೆಗೆ ಸೇರಿಸುವ ನಿರೀಕ್ಷೆ ಕಾಂಗ್ರೇಸ್ಸಿನದು