Thursday, September 19, 2024
spot_img

ಮಂಡ್ಯದಲ್ಲಿ ಶೇ.84.45ರಷ್ಟು ಮತದಾನ

ಜಿಲ್ಲೆಯಲ್ಲಿ ಶೇ.84.45ರಷ್ಟು ಮತದಾನ:ಜಿಲ್ಲಾಧಿಕಾರಿ ಡಾ. ಹೆಚ್ ಎನ್ ಗೋಪಾಲಕೃಷ್ಣ

ಮಂಡ್ಯ.ಮೇ.12(ಕರ್ನಾಟಕವಾರ್ತೆ):- ಜಿಲ್ಲೆಯಲ್ಲಿ ಮೇ.10ರಂದು 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ ಶೇ.84.45ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 15,33831 ಮತದಾರರಿದ್ದು, ಈ ಪೈಕಿ 7,59323 ಪುರುಷರು, 7,74363 ಮಹಿಳೆಯರು ಹಾಗೂ 145 ಇತರೆ ಮತದಾರರಿದ್ದಾರೆ. ಒಟ್ಟು 12,95319 ಮತದಾನವಾಗಿದೆ. ಈ ಪೈಕಿ 6,46227 ಪುರುಷರು ಹಾಗೂ 6,49049 ಮತ್ತು ಇತರೆ 43 ಮಂದಿ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 99,390 ಪುರುಷ 96,658 ಮಹಿಳೆ ಹಾಗೂ 5 ಇತರರು, ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 89,083 ಪುರುಷ 92,541 ಮಹಿಳಾ ಹಾಗೂ 10 ಮಂದಿ ಇತರರು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 90,864 ಪುರುಷ 91,273 ಮಹಿಳಾ ಹಾಗೂ 4 ಇತರರು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 85, 755 ಪುರುಷ 87206 ಮಹಿಳಾ ಹಾಗೂ 15 ಇತರರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 91,075 ಪುರುಷ 92,838 ಮಹಿಳಾ ಹಾಗೂ 3 ಇತರರು, ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 96,244, ಪುರುಷ 94,399 ಮಹಿಳಾ ಹಾಗೂ 5 ಇತತರು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ 93,816 ಪುರುಷ 94,134 ಹಾಗೂ 1 ಇತರರು ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಜಿಲ್ಲೆಯಾದ್ಯಾಂತ 80 ವರ್ಷ ಮೇಲ್ಪಟ್ಟ, ಅಂಗ ವಿಕಲ, ಅಗತ್ಯ ಸೇವೆ ಒದಗಿಸುವ ಮತದಾರ ಮತ್ತು ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ಅಂಚೆ ಮತಪತ್ರದ ಮೂಲಕ ಒಟ್ಟು 10959 ಮಂದಿ ಮತ ಚಲಾಯಿಸಿದ್ದಾರೆ ಎಂದರು.

ಮತದಾನದ ಮುಕ್ತಾಯದ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಬಿಗಿ ಪೆÇಲೀಸ್ ಭದ್ರತೆಯಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಕಟ್ಟಡದಲ್ಲಿ ಏರ್ಪಡಿಸಿರುವ ಭದ್ರತಾ ಕೊಠಡಿಯಲ್ಲಿ ವಿಧಾನಸಭಾ ಕ್ಷೇತ್ರವಾರು ತಲಾ ಎರಡು ಕೊಠÀಡಿಗಳಂತೆ ಒಟ್ಟು 14 ಕೊಠಡಿಗಳಲ್ಲಿ ಇರಿಸಲಾಗಿದೆ. ಮೊಹರಾದ ಭದ್ರತಾ ಕೊಠಡಿಯನ್ನು ಆರಕ್ಷಕ ಇಲಾಖೆಗೆ ಸುರಕ್ಷತೆಗಾಗಿ ಹಸ್ತಾಂತರಿಸಿದ್ದು, ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಒಟ್ಟು 7 ಎಣಿಕೆ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಕೊಠಡಿಗಳಲ್ಲಿ ಒಟ್ಟು 14 ಟೇಬಲ್‍ಗಳನ್ನು ಮತ ಎಣಿಕೆಗಾಗಿ ವ್ಯವಸ್ಥೆಗೊಳಿಸಲಾಗಿದೆ. ಎಣಿಕೆ ಕಾರ್ಯಕ್ಕೆ ಪ್ರತಿ ಟೇಬಲ್‍ಗೆ ತಲಾ ಒಬ್ಬ ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಮತ್ತು ಮೈಕ್ರೋ ಅಬ್ಸರ್‍ವರ್‍ಗಳನ್ನು ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಟೇಬಲ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು.

ಒಟ್ಟಾರೆ 120 ಅಧಿಕಾರಿ ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ರಾಂಡಮೈಜೆಷನ್ ಪಕ್ರಿಯೆ ಮುಖಾಂತರ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ಹಂಚಿಕೆ ಮಾಡಲಾಗುವುದು, ಪ್ರತಿ ಟೇಬಲ್‍ಗೆ ಸಿಸಿ ಕ್ಯಾಮರ ಅಳವಡಿಸಲಾಗಿದೆ ಎಂದರು.

ಮೇ 13ರ ಬೆಳಿಗ್ಗೆ 07.15 ಗಂಟೆಗೆ ಭದ್ರತಾ ಕೊಠಡಿಯನ್ನು ಎಣಿಕೆ ವೀಕ್ಷಕರ ಸಮಕ್ಷಮದಲ್ಲಿ ತೆರೆದು ಬೆಳಿಗ್ಗೆ 08.00 ಗಂಟೆಗೆ ಅಂಚೆ ಮತ ಎಣಿಕೆಯನ್ನು ಪ್ರಾರಂಭಿಸಲಾಗುವುದು. ಬೆಳಿಗ್ಗೆ 8.15 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಪಾರಂಭವಾಗುತ್ತದೆ ಎಂದರು.

ಏಣಿಕೆ ಕೇಂದ್ರದೊಳಗೆ ಮೊಬೈಲ್ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಫೋಟಕ ಸಾಮಗ್ರಿಗಳನ್ನು
ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮತ ಏಣಿಕೆ ದಿನವಾದ ಮೇ 13 ರ ಬೆಳಿಗ್ಗೆ 6.00ಗಂಟೆಯಿಂದ ಮೇ 14 ರ ಬೆಳಿಗ್ಗೆ 10.00ಗಂಟೆಯವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಒಣ ದಿನ(Dry day)ವನ್ನು ಘೋಷಿಸಲಾಗಿದೆ ಎಂದರು.

ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆ ನಂತರ ಎಣಿಕೆ ವೀಕ್ಷಕರ ಅಭ್ಯರ್ಥಿಗಳ/ಎಜೆಂಟರುಗಳ ಸಮಕ್ಷಮದಲ್ಲಿ ಲಾಟರಿ ಚೀಟಿ ಎತ್ತುವುದರ ಮೂಲಕ 5 ವಿವಿಪ್ಯಾಟ್‍ಗಳನ್ನು ಆಯ್ಕೆ ಮಾಡಿ ವಿವಿಪ್ಯಾಟ್‍ನಲ್ಲಿರುವ ಸ್ಲಿಪ್‍ಗಳನ್ನು ಇವಿಎಂ ಯಂತ್ರಗಳಲ್ಲಿ ಚಲಾವಣೆಯಾಗಿರುವ ಮತಗಳೊಂದಿಗೆ ತಾಳೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶೇಕ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಬಕಾರಿ ಆಯುಕ್ತೆ ಡಾ.ಮಹದೇವಿ ಬಾಯಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!