ಕೋರಿಕೆ ಸಲ್ಲಿಸಿದ್ದ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ ಸುವ್ಯವಸ್ಥಿತವಾಗಿ ಮನೆಯಿಂದಲೇ ನಡೆಯುತ್ತಿರುವ ಮತದಾನ ಪ್ರಕ್ರಿಯೆ
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಗೌಪ್ಯವಾಗಿ ಮತದಾನ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್.ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಮಂಡ್ಯ ಹಾಗೂ ಮದ್ದೂರು ವಿಧಾನಸಭಾ ವ್ಯಾಪ್ತಿಯ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರ ಮತದಾನದ ಪ್ರಕ್ರಿಯೆಯನ್ನು ಖುದ್ದು ವೀಕ್ಷಣೆ ಮಾಡಿದರು.
ಜಿಲ್ಲೆಯಲ್ಲಿ ಮೇ 3 ರಂದು ಮನೆಯಿಂದಲೇ ಮತದಾನ ಪ್ರಕ್ರಿಯೆ ಪ್ರರಾಂಭವಾಗಿದ್ದು, ಮೇ 3 ರಂದು ಕೆ.ಆರ್.ಪೇಟೆಯಲ್ಲಿ 80 ವರ್ಷ ಮೇಲ್ಪಟ್ಟ 109 ಹಾಗೂ 29 ವಿಕಲಚೇತನರು ಒಟ್ಟು 138 ಜನರು ಮತ ಚಲಾಯಿಸಿದ್ದಾರೆ.
ಮದ್ದೂರಿನಲ್ಲಿ 80 ವರ್ಷ ಮೇಲ್ಪಟ್ಟ 177 ಹಾಗೂ 47 ವಿಕಲಚೇತನರು ಒಟ್ಟು 224 ಜನರು ಮತ ಚಲಾಯಿಸಿದ್ದಾರೆ.
ಮಳವಳ್ಳಿ 80 ವರ್ಷ ಮೇಲ್ಪಟ್ಟ 343 ಹಾಗೂ 85 ವಿಕಲಚೇತನರು ಒಟ್ಟು 428 ಜನರು ಮತ ಚಲಾಯಿಸಿದ್ದಾರೆ.
ಮಂಡ್ಯ 80 ವರ್ಷ ಮೇಲ್ಪಟ್ಟ 78 ಹಾಗೂ 24 ವಿಕಲಚೇತನರು ಒಟ್ಟು 102 ಜನರು ಮತ ಚಲಾಯಿಸಿದ್ದಾರೆ.
ಮೇಲುಕೋಟೆ 80 ವರ್ಷ ಮೇಲ್ಪಟ್ಟ 116 ಹಾಗೂ 26 ವಿಕಲಚೇತನರು ಒಟ್ಟು 142 ಜನರು ಮತ ಚಲಾಯಿಸಿದ್ದಾರೆ.
ನಾಗಮಂಗಲ 80 ವರ್ಷ ಮೇಲ್ಪಟ್ಟ 80 ಹಾಗೂ 26 ವಿಕಲಚೇತನರು ಒಟ್ಟು 106ಜನರು ಮತ ಚಲಾಯಿಸಿದ್ದಾರೆ.
ಶ್ರೀರಂಗಪಟ್ಟಣ 80 ವರ್ಷ ಮೇಲ್ಪಟ್ಟ 87 ಹಾಗೂ 37 ವಿಕಲಚೇತನರು ಒಟ್ಟು 124 ಜನರು ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 990 ಹಾಗೂ 274 ವಿಕಲಚೇತನರು ಒಟ್ಟು 1264 ಜನರು ಮತ ಚಲಾಯಿಸಿದ್ದಾರೆ.