ಮಂಡ್ಯ ವಿಧಾನಸಭಾಕ್ಷೇತ್ರದಲ್ಲಿ ಮೂರು ಪಕ್ಷಗಳ ತಳಮಳ
ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಬಾಕೀ ಇದ್ದು ಮಂಡ್ಯ ವಿಧಾನಸಭಾ ಕ್ಷೇತ್ರದ ಮೂರು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸದಿರುವುದು ಅಯಾ ಪಕ್ಷಗಳ ಕಾರ್ಯಕರ್ತರಲ್ಲಿ ತಳಮಳಕ್ಕೆ ಕಾರಣವಾಗಿದೆ.ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿ ಹಾಲೀ ಶಾಸಕ ಎಂ.ಶ್ರೀನಿವಾಸ್ ಗೆ ಈ ಸಾರಿಯೂ ಟಿಕೇಟ್ ಘೋಷಣೆಯಾದರೂ ಶ್ರೀನಿವಾಸ್ ರವರ ಆರೋಗ್ಯ ಇತ್ಯಾದಿ ಕಾರಣಗಳಿಂದ ಕಡೇ ಗಳಿಗೆಯಲ್ಲಿ ಅಭ್ಯರ್ಥಿ ಬದಲಾಗುವ ನಿರೀಕ್ಷೆ ಅಲ್ಲಿನ ಇನ್ನುಳಿದ ಅಕಾಂಕ್ಷಿಗಳದ್ದಾಗಿದೆ.ಜಾದಳದಲ್ಲು ಸಾಕಷ್ಟು ಹುರಿಯಾಳುಗಳಿದ್ದರು ಮಾಜೀ ಸಂಸದ ಕೆ.ವಿ.ಶಂಕರಗೌಡರ ಮೊಮ್ಮಗ ಪಿಇಎಸ್ ಕಾಲೇಜು ಅಧ್ಯಕ್ಷ ಕೆ.ಎಸ್ ವಿಜಯಾನಂದಾ ಟಿಕೇಟ್ ಗಾಗಿ ಕಡೇ ಕ್ಷಣದ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.ಜ್ಯಾದಳದಲ್ಲಿ ಇನ್ಯಾರಿಗೆ ಟಿಕೇಟ್ ಘೋಷಣೆಯಾದರೂ ಎದುರಾಳಿಗಳದ್ದು ಕೇಕ್ ವಾಕ್ ಆಗಿಬಿಡುತ್ತದೆ ಎನ್ನುತ್ತಾರೆ ಜ್ಯಾದಳ ಬೆಂಬಲಿಗ ಸಾರಿಗೆ ಉದ್ಯಮಿ ಕಲ್ಲಹಳ್ಳೀ ಮಹೇಶ್.
ಇತ್ತ ಕಾಂಗ್ರೇಸ್ ನಲ್ಲು ಟಿಕೇಟ್ ಬಯಸಿ ಹದಿನಾರು ಮಂದಿ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಮೂವರು ಮಾತ್ರ ಹೈಕಮಾಂಡ್ ನ ಚಿತ್ತದಲ್ಲಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಗಣಿಗ ರವಿಕುಮಾರ್ ಜ್ಯಾದಳದಿಂದ ಈಚೆಗಷ್ಟೆ ಪಕ್ಷ ಸೇರಿದ ಗುತ್ತಿಗೆದಾರ ಕೀಲಾರ ರಾಧಾಕೃಷ್ಣ. ರಿಯಲ್ ಎಸ್ಟೇಟ್ ಉದ್ಯಮಿ ಡಾಕ್ಟರ್ ಕೃಷ್ಣ ಪ್ರಮುಖರು.ಇವರ ಪೈಕಿ ಗಣಿಗ ರವಿಕುಮಾರ್ ಯುವಕ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ತೊಡಗಿಕೊಂಡಿದ್ದು ಜಿಪಂ ತಾಪಂ ನಗರಸಭೆ ಚುನಾವಣೆ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖರಾಗಿದ್ದಾರೆ.ಇನ್ನುಳಿದವರು ಚುನಾವಣೆ ಕಾಲಕ್ಕೆ ಪಕ್ಷ ಸೇರಿದವರಾಗಿದ್ದಾರೆ. ಇವರಲ್ಲದೆ ಹಿರಿಯ ಕಾಂಗ್ರೇಸ್ಸಿಗ ಮಾಜಿ ಸಚಿವರಾದ ಎಂ.ಎಸ್ ಆತ್ಮನಂದಾ ಸಹ ಟಿಕೇಟ್ ಅಕಾಂಕ್ಷಿಯಾಗಿರುವುದನ್ಮು ಪಕ್ಷದ ಹೈಕಮಾಂಡ್ ಹೇಗೆ ತೀರ್ಮಾನಿಸುತ್ತದೊ ಎಂಬ ಕುತೂಹಲ ಎಲ್ಲರದು.ಮಹತ್ವಾಕಾಂಕ್ಷೀ ಅಲ್ಲದ ಆತ್ಮಾನಂದಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದವರು 2008ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ನಿರಾಕರಣೆಯಾದಂದನಿಂದ ತೆರೆಮರೆಯಲ್ಲೆ ಇದ್ದ ಆತ್ಮನಂದಾರನ್ನು ಕಾಂಗ್ರೆಸ್ ಪಕ್ಷ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಿಕೊಂಡಿರುವ ಬಿಜೆಪಿ ಪಕ್ಷ ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಮುಖ ಮೂರನೆ ಪಕ್ಷವಾಗಿದೆ.ಜ್ಯಾದಳ ಸೇರಿದಂತೆ ವಿವಿಧ ಪಕ್ಷಗಳಿಂದ ಹೊರನಡೆದ ಅಸಮಾಧಾನಿತರೆ ಇಲ್ಲಿ ಬಿಜೆಪಿಯ ನಾಯಕರಾಗಿದ್ದಾರೆ.2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎರಡನೇ ಸ್ಥಾನಕ್ಕೆ ತಲುಪಿದ್ದ ಮೂಡಾ ಮಾಜೀ ಅಧ್ಯಕ್ಷೆ ವಿದ್ಯಾ ನಾಗೇಂದ್ರ ಕಳೆದ ಬಾರೀ ಬಿಜೆಪಿಯ ಹುರಿಯಾಳಾಗಿದ್ದ ಚಂದಗಾಲು ಶಿವಣ್ಣ.ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ ಬಿಜಿಪಿಯ ಟಿಕೇಟ್ ನ ಪ್ರಮುಖ ಅಕಾಂಕ್ಷೀಗಳಾಗಿದ್ದಾರೆ.ಮೂರು ಪಕ್ಷಗಳು ಅಳೆದು ಸುರಿದು ಅಭ್ಯರ್ಥಿಯನ್ನು ಘೋಷಿಸುವ ತಂತ್ರದಲ್ಲಿವೆ.ಆದರೆ ಎಲ್ಲ ಪಕ್ಷಗಳು ಆರ್ಥಿಕವಾಗಿ ಸಂಪನ್ಮೂಲ ಭದ್ರ ಇರುವವರಿಗೆ ಆದ್ಯತೆ ನೀಡುವುದು ಖಚಿತವಾಗಿದೆ.ಇನ್ನೆರೆಡು ದಿನಗಳಲ್ಲಿ ಪ್ರಮುಖ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಖೈರುಗೊಳಿಸಲಿದ್ದು ಕಾರ್ಯಕರ್ತರ ಕುತೂಹಲಕ್ಕೆ ಶುಭಂ ಘೋಷಿಸಲಿದೆ.ಅಲ್ಲೀಗೆ ಬೀದಿ ಬಾಯಿಗಳ ಚರ್ಚೆಯ ಗತಿಯು ಬದಲಾಗಲಿದೆ.