ಪಾಂಡವಪುರ:ಮೇ:18
ನನಗೆ ಮತ ಹಾಕಿರುವವರು ಅಪ್ಪನಿಗೆ ಹುಟ್ಟಿದವರು ಎಂದು ಬಾಲಿಶ ಹೇಳಿಕೆ ನೀಡುವ ಮೂಲಕ ಸ್ತ್ರೀಯರ ಶೀಲದ ವಿಚಾರಕ್ಕೆ ಕೈ ಹಾಕಿರುವ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಮುಂದಿನ ದಿನಗಳಲ್ಲಿ ಮಹಿಳೆಯರು ಬೀದಿಯಲ್ಲಿ ಕಸಪೊರಕೆ ಹಿಡಿದು ಹೊಡೆಯಲಿದ್ದಾರೆ ಎಂದು ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಹೇಳಿದರು.
ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ, ಒಮ್ಮೆ ಸಂಸದ ಹಾಗೂ ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು, ತಮಗೆ ಹಾಕಿದ ಮತಗಳು ಅಪ್ಪನಿಗೆ ಹುಟ್ಟಿದವು ಎಂದು ನೀಡಿರುವ ಹೇಳಿಕೆಯನ್ನು ತಾಯಂದಿರುವ ಪ್ರಶ್ನಿಸಿದ್ದಾರೆ ಎಂದರು.