ಮೇಲುಕೋಟೆಯಲ್ಲಿ ಸರಣಿ ಕಳ್ಳತನ : ಕೈಕಟ್ಟಿ ಕುಳಿತ ಪೊಲೀಸ್ ಇಲಾಖೆ: ಆತಂಕದಲ್ಲಿ ಗ್ರಾಮಸ್ಥರು
ಮೇಲುಕೋಟೆ: ಐತಿಹಾಸಿ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ರಾತ್ರಿವೇಳೆಯಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಂಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ
ಇಲ್ಲಿನ ಕೆಂಪಮ್ಮ, ಲೀಲಾಮ್ಮ, ಈರೇಗೌಡ್ರು ಮರಿಯಮ್ಮ ಸೇರಿದಂತೆ ಐದು ಕ್ಕೂ ಹೆಚ್ಚು ಮನೆಗಳಲ್ಲಿ ಮದ್ಯರಾತ್ರಿಯ ವೇಳೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಚಾಲಕಿ ಕಳ್ಳರು ಮನೆಯ ಬಿಗಮುರಿದು ಮನೆಯಲ್ಲಿದ್ದ ಚಿನ್ನಾಂಭರಣ . ಹಣ ಕಳ್ಳತನ ಮಾಡಿರು ಘಟನೆ ನಡೆದಿದೆ ಒಟ್ಟು ಐದು ಲಕ್ಷಕ್ಕೂ ಮೌಲ್ಯದಷ್ಟು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರ ವೈಫಲ್ಯ:ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಹೆಚ್ಚಾಗಿದೆ. ಅಕಪಕ್ಕದ ಹಳ್ಳಿಗಳಲ್ಲಿ ದೇವಾಲಯ, ಮನೆಗಳು ಕೋಳಿ ಅಂಗಡಿಗಳು, ದಿನಾಸಿ ಅಂಗಡಿಗಳು, ರೈತ ಹಸುಕರು ಮೇಕಗಳ ಕಳ್ಳತನ ದಿನೇ ದಿನೇ ಹೆಚ್ಚಾಗುತ್ತಿದೆ. ರೈತರು ಗ್ರಾಮಸ್ಥರು ದೂರು ನೀಡಲು ಬಂದರೆ ಪ್ರಕರಣ ದಾಖಲಿಸದೆ ಇಲ್ಲ ಸಲ್ಲದ ಸಾಬುಬೂ ಹೇಳಿ ಪ್ರಕರಣ ಮುಚ್ಚಿಹಾಕಲಾಗುತ್ತಿದೆ . ಹೋಬಳಿಯಲ್ಲಿ ಕಳ್ಳತನ ತಡೆಗಟ್ಟಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.