ಪಂಡಿತ್ ತಾರನಾಥ್ ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಆಚೆಗೆ ಬರುತ್ತಿದ್ದಂತೆ ರಾಜ್ಯ ಸರಕಾರ ಆಲರ್ಟ್ ಆಗಿದೆ.ಪಂಡಿತ ತಾರನಾಥರಿಗೆ ಕಾರ್ಯಕ್ರಮ ನೀಡಲು ಲಂಚ ಕೇಳಿದ ಪ್ರಕರಣವನ್ನು ಮೈಸೂರಿನ ಆಂದೋಲನ ದಿನಪತ್ರಿಕೆ ಹೊರಗೆಡವಿತ್ತು.ಈ ಕುರಿತು ತಾರನಾಥರ ಮನೆಗೆ ಭೇಟಿ ನೀಡಿ ಅವರ ಅಭಿಪ್ರಾಯವನ್ನು ವರದಿಗಾರ ಪಡೆದಿದ್ದರು.ನಂತರದಲ್ಲಿ ಕಲಾವಿದರ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಆಚೆಗೆ ಬರುತ್ತಿದ್ದಂತೆ ಅಧಿಕಾರಿಗಳ ದಂಡು ತಾರನಾಥರ ಮನೆಗೆ ಓಡೋಡಿ ಹೋಗಿತ್ತು.ನಂತರ ಸ್ವತಃ ತಾರನಾಥರು ನನ್ನ ಬಳಿ ಯಾರೂ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ.ನನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ಹೇಳಿಕೆ ನೀಡಿದರು. ಮೈಸೂರು ಉಸ್ತುವಾರಿ ಸಚಿವ ಎಚ್ ಸಿ ಮಹಾದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದೀಗ ತಾರನಾಥರ ಎರಡನೇ ಹೇಳಿಕೆ ಹೊರಬೀಳುತ್ತಿದ್ದಂತೆ ದಸರಾದಲ್ಲಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ
.ಈ ಸಂಬಂದ ಹೇಳಿಕೆ ಬಿಡುಗಡೆ ಮಾಡಿರುವ ದಸರಾ ಉಪಸಮಿತಿ ಈ ಮೊದಲೆ ಕಲಾವಿದರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪಂಡಿತ ತಾರನಾಥರ ಹೆಸರಿತ್ತು.ಅವರ ಅನಾರೋಗ್ಯದ ಕಾರಣ ಅವಕಾಶ ಮಾಡಲಾಗಿರಲಿಲ್ಲ ಎಂದು ಹೇಳಿದೆ.ಮುಂದುವರೆದು ಪ್ರಧಾನ ವೇದಿಕೆಯಲ್ಲಿ ಆಕ್ಟೋಬರ್ 21 ರಂದು ತಾರನಾಥರಿಗೆ ಒಂದು ಗಂಟೆ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ. ದಸರಾ ನಾಡಿನ ಜನರಿಗೆ ಒಂದು ಸಾಂಸ್ಕೃತಿಕ ಹಬ್ಬವಾದರೆ ಅಧಿಕಾರಸ್ಥರಿಗೆ ಇದು ಸಾರ್ವಜನಿಕರ ದುಡ್ಡನ್ಮು ಮೇಯುವ ಹಬ್ಬವಾಗಿದೆ.ಇದಲ್ಲದೆ ವಿವಿಧ ಇಲಾಖೆಗಳ ಸಾಧನೆಗಳ ಟ್ಯಾಬ್ಲೋಗಳ ನಿರ್ಮಾಣದಲ್ಲು ಲಕ್ಷಾಂತರ ರೂಪಾಯಿ ಲಂಚ ಕೊಟ್ಟವರಿಗಷ್ಟೆ ಟ್ಯಾಬ್ಲೋ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಇದರಲ್ಲಿ ಮುಖ್ಯಮಂತ್ರಿಗಳ ಕಚೇರಿಯ ನಿರ್ದೇಶನದಂತೆ ಎಲ್ಲವು ಸಾಗಿದೆ ಎಂದು ಹೇಳಲಾಗುತ್ತಿದೆ.ಒಟ್ಟಾರೆ ಬರದ ಹಿನ್ನೆಲೆಯಲ್ಲಿ ದಸರಾ ಹೆಸರಿನಲ್ಲಿ ಜನಪ್ರತಿನಿಧಿಗಳ ಅಧಿಕಾರಿಗಳ ಭೂರಿ ಭೋಜನ ಸಾಗಿದೆ