Sunday, July 14, 2024
spot_img

ರಾಜಕೀಯ ಸಮಾವೇಶಗಳ ಹಿಂದಿನ “ಜನಶಕ್ತಿ ಯ ಅಸಲಿ ಕಾರಣಗಳು

ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ರಾಲಿ ಸಮಾವೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.ಅಷ್ಟಕ್ಕು ಈಗೆ ಸಮಾವೇಶ ರಾಲಿಗಳಿಗೆ ಸೇರುವ ಜನರು ಯಾರು?ಈ ಸಮಾವೇಶಕ್ಕೆ ಸೇರುವ ಜನರ ಸಂಖ್ಯೆಯನ್ಮು ಗಮನಿಸಿ ಮೀಡಿಯಾಗಳು ಸಮಾವೇಶ ಯಶಸ್ವಿ ಎಂದು ಷರಾ ಬರೆಯುತ್ತವೆ.ಇದರ ಆಧಾರದ ಮೇಲೆ ಚುನಾವಣೆಗಳ ಫಲಿತಾಂಶಗಳನ್ನು ಅಳೆಯಲು ಆರಂಭಿಸುತ್ತಾರೆ.
ಅಸಲಿಗೆ ಈ ಸಮಾವೇಶಕ್ಕೆ ಬರುವವರು ನಗರಗಳ ಕೊಳೆಗೇರಿಗಳ ಬಡವರು ಗ್ರಾಮೀಣಾ ಪ್ರದೇಶದ ಬಡವರೆ ಆಗಿರುತ್ತಾರೆ. ಈ ಸಮಾವೇಶಗಳನ್ನು ಆಯೋಜಿಸುವ ಪಕ್ಷಗಳ ಸ್ಥಳೀಯ ಪ್ರತಿನಿಧಿಗಳು ಈ ಜನರನ್ನು ತಲಾ ನೂರೋ ಇನ್ನೂರಿಗೋ ಬಾಡಿಗೆ ಆಧಾರದಲ್ಲಿ ಜನರನ್ನು ಪೂರೈಸುತ್ತಾರೆ.ಹೆಚ್ಚು ಹಣ ಬಲ ತೋಳ್ಬಲ ಇರುವ ಪಕ್ಷಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪೂರೈಕೆಯಾಗುತ್ತದೆ.

ಈ ಸಭೆಗಳಿಗೆ ಬರುವ ಮಂದಿಗೂ ತಾವು ಹಣ ಪಡೆದು ಬಂದವರಾಗಿದ್ದರು ಸಮಾವೇಶಗಳಲ್ಲಿ ನಡೆಯುವ ಭಾಷಣಗಳು ಸಹ ಇವರನ್ಮು ಪ್ರಭಾವಿಸುವುದು ಉಂಟು.ಬಹುತೇಕ ಗುತ್ತಿಗೆದಾರರು.ಸ್ಥಳೀಯ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಬಡ್ಡೀ ವ್ತಾಪಾರಿಗಳು ಸ್ಥಳೀಯ ರೌಡಿಗಳು ಇಲ್ಲವೆ ಅನ್ಯ ಮಾರ್ಗಗಳಿಂದ ಬೇನಾಮಿ ದುಡ್ಡು ಮಾಡಿಕೊಂಡವರೆ ಈ ಪಕ್ಷಗಳ ಸ್ಥಳೀಯ ಮುಖಂಡರೆ ಆಗಿರುತ್ತಾರೆ.ಈ ಮುಖಂಡರುಗಳಿಗೆ ಮತದಾರರೊಂದಿಗೆ ಯಾವುದೆ ರಾಜಕೀಯ ಸಂಬಂದ ಇರುವುದಿಲ್ಲ. ಬದಲಿಗೆ ಇವರಿಗೂ ಮತದಾರರಿಗೂ ಇರುವ ಸಂಬಂದ ವ್ಯವಹಾರಿಕ ಸಂಬಂದ ಮಾತ್ರವೇ ಆಗಿರುತ್ತದೆ. ಇವರಿಂದ ಬಡ್ಡಿಗೆ ಸಾಲ ಪಡೆಯುವವರು ಇವರ ಹೊಲಮನೆಗಳಲ್ಲಿ ದುಡಿಯುವವರು ರೇಷನ್ ಅಂಗಡಿಗಳ ಮಾಲೀಕರು ಇವರ ಪ್ರಭಾವ ಮತದಾರರ ಮೇಲೆ ನಿತ್ಯ ಯಾವುದಾದರೂ ರೂಪದಲ್ಲಿ ಇದ್ದೆ ಇರುತ್ತದೆ.

ಇದೆಲ್ಲದರ ಕಾರಣಕ್ಕೆ ಜನ ಸಾಗರವಾಗಿ ಹರಿದು ಬರುತ್ತಾರೆ.ಇದನ್ನೆ ಮೀಡಿಯಾಗಳು ಭಾರೀ ಯಶಸ್ವಿ ಎಂದು ಬರೆದು ಇನ್ನೊಂದಿಷ್ಟು ತಟಸ್ಥ ಮತದಾರರನ್ನು ಪ್ರಭಾವಿಸುವಂತೆ ಮಾಡುತ್ತವೆ.ಸಮಾವೇಶಗಳಿಗೆ ಹಣ ಕೊಟ್ಟು ಜನ ಕರೆದುತರುವಲ್ಲಿ ಯಾವ ಪಕ್ಷಗಳು ಹಿಂದೆ ಬಿದ್ದಿಲ್ಲ.ವ್ಯತ್ಯಾಸ ಏನೆಂದರೆ ಯಾರಿಗೆ ಎಷ್ಟು ಹಣಬಲ ತೋಳ್ಬಲ ಇದೆ ಅಷ್ಟರಮಟ್ಟಿಗೆ ಸಮಾವೇಶಗಳಿಗೆ ಜನ ಹರಿದು ಬರುತ್ತಾರಷ್ಟೆ.ಸ್ಥಳೀಯ ತಾಪಂ ಅಭ್ಯರ್ಥಿಯಿಂದ ಹಿಡಿದು ವಿಶ್ವಗುರು ಎಂದು ಬೀಗುವ ನರೇಂದ್ರ ಮೋದಿಯ ಸಮಾವೇಶದವರೆಗೂ ಹಣ ಕೊಟ್ಟೆ ಜನರನ್ನು ಕರೆತರುವುದು.

ಸಮಾವೇಶಕ್ಕೆ ಬರುವ ಜನರಲ್ಲಿ ಶೇ೨೫ರಷ್ಡು ಮಂದಿ ಮಾತ್ರ ಪಕ್ಷಕ್ಕೆ ಸಂಬಂದಿಸಿದ ಕಾರ್ಯಕರ್ತರು ನಾಯಕರು ಇರುತ್ತಾರೆ.ಅಯಾ ಪಕ್ಷದವರೆ ಪಟಾಕಿ ಹೊಡೆಯಲು ಹಾರ ಹಾಕಲು ಹೂ ಎರಚಲು ಟೋಪಿ ಹಾಕಲು ವ್ಯವಸ್ಥೆ ಮಾಡಿರುತ್ತಾರೆ.

ಆದರೆ ಮೀಡಿಯಾಗಳು ಜನರೆ ಹೂ ಎರಚಿದಂತೆ ಸ್ವಯಂಪ್ರೇರಿತವಾಗಿ ಬಂದಿರುವಂತೆ ಬಿಂಬಿಸುತ್ತಾ ಅಸಲಿ ಕಾರಣಗಳನ್ನು ಮರೆ ಮಾಚುತ್ತವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!