Thursday, December 5, 2024
spot_img

ಶಿಕ್ಷಣದಲ್ಲಿ ಹಿಂದಿ ಪಠ್ಯಕ್ರಮ ಕೈಬಿಡಲು ಆಗ್ರಹ

ಶಿಕ್ಷಣದಲ್ಲಿ ಹಿಂದಿ ಪಠ್ಯಕ್ರಮ ಕೈಬಿಡಲು ಆಗ್ರಹ

ಮಂಡ್ಯ: ನ೨೦. ರಾಜ್ಯ ಶಿಕ್ಷಣದಲ್ಲಿ ಹಿಂದಿಪಠ್ಯಗಳನ್ನು ಕೈಬಿಡುವಂತೆ ಹಾಗೂ ಕೇಂದ್ರ ಒಕ್ಕೂಟ ಸರಕಾರದ ಬ್ಯಾಂಕು ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಹಿಂದಿ ಹೇರಿಕೆ ನಿಲ್ಲಿಸುವಂತೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

ರಾಜ್ಯದ ಪಠ್ಯಕ್ರಮಗಳಲ್ಲಿ ಹಿಂದಿ ವಿಷಯಗಳನ್ನು ಕೈಬಿಡುವಂತೆ ಹಿಂದಿ ಹೇರಿಕೆ ನಿಲ್ಲಿಸುವಂತೆ ಇಂದು ವಿವಿಧ ಕನ್ನಡಪರ ಸಂಘಟನೆಗಳು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಿಂದಿ ಹೇರಿಕೆ ವಿರುದ್ದ ಒಕ್ಕೊರಲ ವಿರೋಧ ವ್ಯಕ್ತವಾಯಿತು.

ಸಭೆಯಲ್ಲಿ ಮಾತನಾಡಿದ ಹಿಂದಿ ಹೇರಿಕೆ ವಿರೋಧಿ ಕರ್ನಾಟಕದ ಪಾರ್ವತೀಶ ಬಿಳಿದಾಳೆ. ಉತ್ತರದ ರಾಜ್ಯಗಳಲ್ಲಿ ಇಲ್ಲದ ತ್ರಿಭಾಷ ಸೂತ್ರವನ್ನು ಕರ್ನಾಟಕದಲ್ಲಿ ಹೇರಲಾಗಿದೆ.ಇದರಿಂದಾಗಿ ಕನ್ನಡದ ಮಕ್ಕಳು ಯಾವುದೆ ಪ್ರಯೋಜನ ಇಲ್ಲದಿದ್ದಾಗಿಯು ಹಿಂದಿಯನ್ನು ಕಲಿಯುವುದು ಅನಿವಾರ್ಯಗೊಳಿಸಲಾಗಿದೆ.ಹಿಂದಿ ಕಲಿತರೆ ಉತ್ತರದ ರಾಜ್ಯಗಳಲ್ಲಿ ಉದ್ಯೋಗ ಹಾಗೂ ಪ್ರವಾಸಕ್ಕೆ ಹೋಗಲು ಅನುಕೂಲವೆಂದು ಹೇಳುತ್ತಾ ಬರಲಾಗಿದೆ.ವಾಸ್ತವದಲ್ಲಿ ಉತ್ತರದ ರಾಜ್ಯಗಳ ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಗ ಹುಡುಕುತ್ತಾ ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ.ಹೀಗಿರುವಾಗ ಹಿಂದಿ ಕಲಿಕೆಯಿಂದ ಯಾವುದೆ ಪ್ರಯೋಜನ ಇಲ್ಲವಾಗಿದೆ ಹಿಂದಿ ರಾಷ್ಟ ಭಾಷೆಯಲ್ಲ.ಬದಲಿಗೆ ಕನ್ನಡದಂತೆ ಅದು ಒಂದು ಭಾಷೆಯೆ ವಿನಾ ಮತ್ತೇನು ಹೆಚ್ವುಗಾರಿಕೆ ಹಿಂದಿಗೆ ಇಲ್ಲ ಎಂದರು.

ಮುಂದುವರಿದು ಮಾತನಾಡಿ ರಾಜ್ಯದಿಂದ ಪ್ರತಿವರ್ಷ ನಾಲ್ಕು ಲಕ್ಷ ತೆರಿಗೆ ದುಡ್ಡು ಕೇಂದ್ರದ ಕೈ ಸೇರುತ್ತಿದೆ.ಜಿಎಸ್ ಟಿಯಲ್ಲು ಸರಿಯಾದ ಪಾಲು ಸಿಗುತ್ತಿಲ್ಲ.
ಬ್ಯಾಂಕ್ ರೈಲ್ವೆ ಅಂಚೆ ಕಚೇರಿಯ ಮೂಲಕ ಹಿಂದಿ ಹೇರಲಾಗುತ್ತಿದೆ.ಅನಿಯಂತ್ರಿತ ವಲಸೆಯಿಂದಾಗಿ ಕರ್ನಾಟಕದ ರಾಜಕೀಯ ಭೌಗೋಲಿಕ ವಾತವರಣವೂ ಉತ್ತರ ಭಾರತೀಯರ ಪಾಲಾಗುತ್ತಿದೆಯೆಂದು ಆತಂಕ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ ೮೭ನೇ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಶಿಕ್ಷಣ ಕ್ರಮದಲ್ಲಿ ಹಿಂದಿ ಪಠ್ಯಗಳನ್ನು ಕೈಬಿಡುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿ ಪಠ್ಯಕ್ರಮ ಕೈಬಿಡುವಂತೆ ಅಗತ್ಯ ನಿರ್ಣಯ ಕೈಗೊಳ್ಳಲು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಸಲಾಗುವುದು.ಇದಕ್ಕಾಗಿ ಒಂದು ಲಕ್ಷ ಕರಪತ್ರ.ಪೋಸ್ಟರ್ ಟೀ ಶರ್ಟ್ ಮುದ್ರಿಸಿ ಹಂಚುವುದು.ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ಬೈಕ್ ರಾಲಿ ಹಮ್ಮಿಕೊಳ್ಳಲು ಸಭೆಯು ತೀರ್ಮಾನಿಸಿತು.

ಸಭೆಯಲ್ಲಿ ಬೆಂಗಳೂರಿನ ರಾಜ್ ಕುಮಾರ್ ಅಭಿಮಾನಿ ಸಂಘದ ಶೇ.ಬೋ ರಾಧಕೃಷ್ಣ.ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಜಿಲ್ಲಾಧ್ಯಕ್ಚ ಎಂ.ಎನ್ ಚಂದ್ರು.ಮಂಡ್ಯ ಗ್ರಾಮಾಂತರ ಅಧ್ಯಕ್ಷ ಬಿಎಂ ಮನು.ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಯಣ್.ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿಗೌಡ.ವಕೀಲ ಲಕ್ಷ್ಮಣ್ ಚೀರನಹಳ್ಳಿ.ನವೀನ್.ಲೋಕೇಶ್ ಯಲಿಯೂರು.ಉಪನ್ಯಾಸಕ ಶಿವಮೂರ್ತಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ.ಜಯರಾಂ ಗ್ರಾಪಂ ಸದಸ್ಯ ರಕ್ಷಿತ್ ಕಡಿಲುವಾಗಲು ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!