ಪಾಂಡವಪುರ; ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ.
ಗ್ರಾಮದ ಲೇಟ್ ಮಹದೇವೇಗೌಡ ಅವರ ಪುತ್ರ ಕೆ.ಎಂ.ವಿಶ್ವನಾಥ್ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ತನ್ನ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ನೇಣುಬಿಗಿದುಕೊಂಡಿದ್ದಾರೆ.
2 ಎಕರೆ ಜಮೀನು ಮತ್ತು ತೋಟವನ್ನು ಹೊಂದಿರುವ ರೈತ ವಿಶ್ವನಾಥ್ ಸಹಕಾರ ಬ್ಯಾಂಕ್ , ಖಾಸಗಿ ಸಂಸ್ಥೆ ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು ರೂ.4ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತರಿಗೆ ಪತ್ನಿ ಇದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವಹಿಸಿದ್ದಾರೆ.