ಆಗಷ್ಟೇ ಜನತಾದಳದಿಂದ ಹೊರಬಿದ್ದಿದ್ದ ಸಿದ್ದರಾಮಯ್ಯನವರು ಅಹಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.ಇಂಥದ್ದೆ ಒಂದು ದಿನ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದರು.
ಇತ್ತ ಕರ್ನಾಟಕದಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷವನ್ಮು ಕರ್ನಾಟಕದ ಎಸ್ ಬಂಗಾರಪ್ಪ ಮುನ್ನೆಡೆಸುತ್ತಿದ್ದರು.ಮಂಡ್ಯದಲ್ಲಿ ವಿದ್ಯಾರ್ಥಿ ಹೋರಾಟದ ಹಿನ್ನೆಲೆಯ ಸಿಎಂ ದ್ಯಾವಪ್ಪ ಸಮಾಜವಾದಿ ಪಕ್ಷದ ಜವಾಬ್ದಾರಿ ಹೊತ್ತಿದ್ದರು.(ಈಚೆಗಷ್ಟೆ ಅವರು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ ಜೋಡಿಸಿ ಯಾತ್ರೆಯಲ್ಲಿ ರಾಹುಲರೊಂದಿಗೆ ಮೂರುವರೆ ಸಾವಿರ ಕಿಲೋನಡೆದು ಬಂದಿದ್ದಾರೆ) ಇಂಥ ದ್ಯಾವಪ್ಪ ಅವತ್ತು ಬೆಳ್ಳಂಬೆಳಿಗ್ಗೆ ಕರ್ನಾಟಕ ಭವನಕ್ಕೆ ಭೇಟಿ ನೀಡಿದಾಗ ಸಿದ್ದರಾಮಯ್ಯನವರ ದರ್ಶನವಾಗಿದೆ.ದ್ಯಾವಪ್ಪ ತಮ್ಮ ಪೂರ್ವಪರ ಹೇಳಿಕೊಂಡಾಗ ಸರಿ ಇಲ್ಲೇ ಇರು ವಾಕಿಂಗ್ ಹೋಗಿ ಬರುತ್ತೇನೆ ಒಂದ ನಂತರ ಒಂದು ಕಾಫಿ ಕುಡಿಯೋಣಾ ಎಂದಿದ್ದಾರೆ.
ಕೆಲವೊತ್ತಿಗೆ ಕರ್ನಾಟಕ ಭವನಕ್ಕೆ ಮರಳಿದ ಸಿದ್ದರಾಮಯ್ಯನವರ ಎದುರು ದ್ಯಾವಪ್ಪ ಪ್ರಸ್ತಾವವೊಂದನ್ನು ಮಂಡಿಸಿದ್ದಾರೆ.ನೀವು ಅಹಿಂದ ನಾಯಕರು ನಮ್ಮ ಬಂಗಾರಪ್ಪ ಸಾಹೇಬರು ಅಹಿಂದ ನಾಯಕರು ನೀವು ಸಮಾಜವಾದಿ ಪಕ್ಷಕ್ಕೆ ಬಂದರೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯೋದು ಕಷ್ಟವಲ್ಲ ನೀವು ಮುಖ್ಯಮಂತ್ರಿಯೂ ಆಗಬಹುದು ಎಂದು ಪ್ರಸ್ತಾವಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ನಿಮ್ಮ ಬಂಗಾರಪ್ಪ ದುರಹಂಕಾರಿ ಅವನು ನಮಗೆಲ್ಲಿ ಬಿಟ್ಟು ಕೊಡ್ತಾನೆ ಸಿಎಂ ಸೀಟು ಈಗಾಗಲೇ ಸಿಎಂ ಆಗಿದ್ದಾನಲ್ಲ ಬಿಟ್ಟು ಕೊಡಲಿ ಇನ್ನೊಬ್ಬರಿಗೆ ಏನು ಎರೆಡೆರೆಡು ಬಾರಿ ಸಿಎಂ ಆದರೆ ಕೋಡು ಬಂದು ಬಿಡುತ್ತಾ ಅಂತಾ ಕಿಚಾಯಿಸಿದ್ದಾರೆ.
ಕಡೆಗೆ ಬಂದ ದಾರಿಗೆ ಯಾವ ಲಾಭ ಇಲ್ಲವೆಂಬಂತೆ ದ್ಯಾವಪ್ಪ ಕಾಫೀ ಕುಡಿದು ಎದ್ದು ಬಂದಿದ್ದಾರೆ.
ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಹುದ್ದೆಗೆ ಪ್ರಯತ್ನಿಸುವಾಗ ಇದೆಲ್ಲ ನೆನಪಿಗೆ ಬಂತು