*ಕೆ.ಆರ್.ಪೇಟೆ:ಪಟ್ಟಣದಲ್ಲಿರುವ ಬಿಜಿಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿ ಮಾಕವಳ್ಳಿ ಕಾವ್ಯ ಎಂ.ಕೆ 586 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.*
ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದ ಮುಖಂಡ ಕುಮಾರ್ ಮತ್ತು ರೇಖಾ ಅವರ ಪುತ್ರಿ ಎಂ.ಕೆ ಕಾವ್ಯ ಪಟ್ಟಣದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗ (ಕನ್ನಡ ಮಾಧ್ಯಮ)ದಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಕನ್ನಡ 99. ಆಂಗ್ಲ 90. ಹಿತಿಹಾಸ 100. ಅರ್ಥಶಾಸ್ತ್ರ 99. ಭೂಗೊಳ ಶಾಸ್ತ್ರ 100. ರಾಜ್ಯಶಾಸ್ತ್ರ 98. ಅಂಕಗಳ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡದ್ದಾರೆ
ಫಲಿತಾಂಶ ಹೊರ ಬೀಳುತ್ತಿದ್ದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಜೆ.ಎನ್ ರಾಮಕೃಷ್ಣೇಗೌಡ ಬಿಜಿಎಸ್ ಶಿಕ್ಷಣ ಸಂಸ್ಥೆ ಉದ್ದೇಶವೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾಯಕ ಅದರ ಪ್ರತಿಫಲವಾಗಿ ಇಂದು ಎಂ .ಕೆ ಕಾವ್ಯ ಸೇರಿದಂತೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಪಡೆದು ಗಳಿಸುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆಯ ಕೀರ್ತಿಯ ಮತ್ತಷ್ಟು ಹೆಚ್ಚಿಸಿ ಶ್ರೀ ಶ್ರೀ ಶ್ರೀ ಡಾ:ಬಾಲಗಂಗಾಧರನಾಥ ಸ್ವಾಮೀಜಿಯವರ ಕನಸನ್ನ ನನಸು ಮಾಡುತ್ತಿದ್ದಾರೆ ಇಂತಹ ಪ್ರಾಮಾಣಿಕ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಮುಂದಿನ ದಿನಗಳಲ್ಲಿ ಯಮ್ಮರವಾಗಿ ಬೆಳೆದು ಇವರ ಅಂಗಳದಲ್ಲಿ ನೂರಾರು ವಿದ್ಯಾರ್ಥಿಗಳು ಜ್ಞಾನ ಪಡೆಯುವಂತಾಗಲಿ ಎಂದು ಶುಭ ಕೋರಿದರು.
ಬಳಿಕ ಮಾತನಾಡಿದ ವಿದ್ಯಾರ್ಥಿನಿ ಎಂ.ಕೆ ಕಾವ್ಯ ಜಿಲ್ಲೆಗೆ ಪ್ರಥಮ ಸ್ಥಾನ ಬರುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ ಆದರೂ ನನ್ನ ನಿರೀಕ್ಷೆಗಿಂತ ಕಡಿಮೆ ಅಂಕ ಬಂದರೂ ಖುಷಿಯಾಗಿದೆ. ನಮ್ಮ ಕುಟುಂಬ ರೈತಪಿ ಕುಟುಂಬವಾದರೂ ನನ್ನ ಓದಿಗಾಗಿ ನಮ್ಮ ತಂದೆ ತಾಯಿಯ ಪರಿಶ್ರಮ ಅಪಾರ ಅವರ ಮತ್ತು ನನ್ನ ಶಿಕ್ಷಕವೃಂದ ಹೆಚ್ಚು ಮಾರ್ಗದರ್ಶನದಿಂದ ಉತ್ತಮ ಅಂಕ ಗಳಿಸಿದ್ದೇನೆ.ಪ್ರತಿ ದಿನ ಕಾಲೇಜಿನಲ್ಲಿ ಗುರುಗಳ ಪಾಠಗಳನ್ನು ಸ್ವೀಕರಿಸಿ ಅಂದಂದೆ ಓದುಕೊಳ್ಳುತ್ತಿದ್ದೆ.ಪದವಿ ಓದಿದ ಬಳಿಕ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಗಲು ಇರುಳು ಶ್ರಮವಿಸುತ್ತೇನೆ ಎಂದು ಹೇಳಿದರು.ಬಳಿಕ ವಿದ್ಯಾರ್ಥಿನಿ ಎಂ.ಕೆ ಕಾವ್ಯ ಅವರಿಗೆ ಗ್ರಾಮ ಹಿರಿಯ ಮುಖಂಡರಾದ ಪಟೇಲ್ ತಮ್ಮೆಗೌಡ, ತಾ. ಪಂ ಮಾಜಿ ಉಪಾಧ್ಯಕ್ಷ ಎಂ. ಸಿ ರಾಮೇಗೌಡ, ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಿ ಪ್ರದೀಪ್, ಗ್ರಾ. ಪಂ ಸದಸ್ಯರಾದ ಎಂ.ಆರ್ ಮಂಜೇಗೌಡ,ಕಾಯಿ ಮಂಜೇಗೌಡ, ಸುಶೀಲಮ್ಮ ಲೇಟ್ ಸಣ್ಣಯ್ಯ,ಗ್ರಾಮದ ಯುವ ಮುಖಂಡರು ಸಿಹಿತಿನ್ನಿಸಿ ಸನ್ಮಾನಿಸುವ ಮೂಲಕ ಅಭಿನಂದಿಸಿದರು.