Sunday, December 22, 2024
spot_img

ಮಂಡ್ಯದಿಂದಲೆ ಸ್ಪರ್ಧೆ:ಸುಮಲತಾ ಅಂಬರೀಶ್ ಶಪಥ

ಮಂಡ್ಯದಿಂದಲೇ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ – ಸಂಸದೆ ಸುಮಲತಾ ಅಂಬರೀಶ್ ಘೋಷಣೆ

ಮಂಡ್ಯ: ನಾನು ಈ ಬಾರಿ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ. ಮಂಡ್ಯದಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ 5 ವರ್ಷಗಳ ದಿಶಾ ಸಭೆಗಳಲ್ಲಿ ಹಲವು ವಿಷಯ ಚರ್ಚೆಯಾಗಿದೆ.
ಚರ್ಚೆಯಾದ ವಿಷಯ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಅನ್ನೋ ಬಗ್ಗೆ ವಿವರ ಕೇಳಬೇಕು. ಭ್ರೂಣ ಹತ್ಯೆ ಬಗ್ಗೆ ನಾನು 4 ವರ್ಷಗಳ ಹಿಂದೆಯೆ ಪ್ರಸ್ತಾಪ ಮಾಡಿದ್ದೆ. ಆದರೆ ಅದರ ವಿರುದ್ಧ ಸರಿಯಾದ ಕ್ರಮ ಆಗಲಿಲ್ಲ. ಭ್ರೂಣ ಹತ್ಯೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದ್ದು ಬೇಸರ ತಂದಿದೆ. ಇಂದಿನ ಸಭೆಯಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.

ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮಾತನಾಡಿದಂತ ಅವರು, ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶ ಇದೆ. ಆದರೆ ವಾಸ್ತವ ಮಾಹಿತಿಯನ್ನು ಅಧಿಕಾರಗಳಿಗೆ ತಿಳಿಸಿದ್ದೇನೆ. ಟ್ರಯಲ್ ಬ್ಲಾಸ್ಟ್‌ಗೆ ರೈತರ ವಿರೋಧ ಇದೆ‌. ರೈತರ ಮನವಿಯಲ್ಲಿ ನ್ಯಾಯ ಇದೆ, ನಾನು ಅವರೊಂದಿಗಿದ್ದೇನೆ. ಟ್ರಯಲ್ ಬ್ಲಾಸ್ಟ್ ನಡೆಸಿದರೆ ಅನುಕೂಲಕಕ್ಕಿಂತ ಅನಾನುಕೂಲ ಜಾಸ್ತಿ. ಟ್ರಯಲ್ ಬ್ಲಾಸ್ಟ್‌ಗೆ ಸ್ಟೇ ಆರ್ಡರ್ ತರಲು ರೈತ ಸಂಘ ಮುಂದಾಗಿದೆ. ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇಲ್ಲ ಎಂದರು.

ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಕೊಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದಂತ ಅವರು, ಅಂತೆ ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ನನಗೆ ವಿಶ್ವಾಸ ಇದೆ, ಮಂಡ್ಯ ಬಿಜೆಪಿಗೆ ಸಿಗಲಿದೆ. ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡ್ತಿಲ್ಲ ಎಂದರು.
ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗ್ತಿತ್ತು. ಜೆಡಿಎಸ್‌ ನಾಯಕರು ಏನಾದರೂ ಹೇಳಬಹುದು ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ. ನನ್ನ ಸ್ಪರ್ಧೆ ಖಚಿತ ಎಂಬುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!