ಮೇಲುಕೋಟೆ ಮಾಮಾನ ಹರಕೆ ಕುರಿ:ಮಂಡ್ಯ ಜ್ಯಾದಳ ಅಭ್ಯರ್ಥಿ ಟ್ರೋಲ್
ಮಂಡ್ಯ: ಎ.20.ಮಂಡ್ಯ ವಿಧಾನಸಭಾ ಕ್ಷೇತ್ರದ ಜ್ಯಾದಳ ಅಭ್ಯರ್ಥಿಯಾಗಿ ಧಿಡೀರನೆ ಮನ್ ಮೂಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರು ಹೆಸರು ಘೋಷಣೆಯಾಗುತ್ತಿದ್ದಂತೆ ಆಕ್ರೋಷಗೊಂಡಿರುವ ಬಂಡಾಯ ಅಭ್ಯರ್ಥಿಗಳ ಬೆಂಬಲಿಗರು ವ್ಯಂಗ್ಯಚಿತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಮೇಲುಕೋಟೆ ಜ್ಯಾದಳ ಶಾಸಕ ಸಿ.ಎಸ್ ಪುಟ್ಟರಾಜು ಹಾಗೂ ಹಾಲೀ ಮಂಡ್ಯ ಜ್ಯಾದಳ ಅಭ್ಯರ್ಥಿ ಬಿ.ಆರ್ ರಾಮಚಂದ್ರರ ಚಿತ್ರ ಬಳಸಿ ಮೇಲುಕೋಟೆ ಮಾಮಾನ ಹರಕೆಯ ಕುರಿ ಎಂದು ಹೇಳಲಾಗಿದೆ.ಮೂಲತಃ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ರಾಮಚಂದ್ರು ಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿರುವುದು ಮಂಡ್ಯ ಕ್ಷೇತ್ರದ ಜ್ಯಾದಳ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ರಾಮಚಂದ್ರುಗೆ ಟಿಕೇಟ್ ಕೊಡಿಸುವಲ್ಲಿ ಮೇಲುಕೋಟೆ ಶಾಸಕ ಪುಟ್ಟರಾಜು ಪ್ರಭಾವ ಬೀರಿದ್ದಾರೆ ಎಂಬುದು ಸಹ ಈ ಟ್ರೋಲ್ ಗೆ ಕಾರಣವಾಗಿದೆ ಎನ್ನಲಾಗಿದೆ