ಚುನಾವಣಾ ಅಕ್ರಮ ಎಸಗಿದ ಕದಲೂರು ಉದಯ್ ಬೆಂಬಲಿಗರಿಂದ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ
ಮದ್ದೂರು:ಮೇ.11 ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದುದ್ದನ್ನು ವರದಿ ಮಾಡುತ್ತಿದ್ದ ಸ್ಥಳೀಯ ಪತ್ರಿಕೆಯ ಸಂಪಾದಕನ ಮೇಲೆ ಮದ್ದೂರು ಕಾಂಗ್ರೇಸ್ ಅಭ್ಯರ್ಥಿ ಬೆಂಬಲಿಗರು ಎನ್ನಲಾದ ಕೆಲವರು ಹಲ್ಲೇಗೆ ಯತ್ನಿಸಿದ ಘಟನೆ ನಿನ್ನೆ ದಿನ ಮದ್ದೂರಿನಲ್ಲಿ ಜರುಗಿದೆ.
ಮದ್ದೂರಿನ ಕೆಮ್ಮಣ್ಣು ಕಾಲುವೆ ಬಳಿಯಲ್ಲಿ ನೂರಾರು ಮತದಾರರು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಸರದಿ ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿದ ಶಿಂಷಾಪ್ರಭ ಪತ್ರಿಕೆಯ ಗುರುಬಸವಯ್ಯ ಸಾಲಿನಲ್ಲಿ ನಿಂತಿರುವ ಮತದಾರರ ಬಳಿ ಪ್ರಶ್ನಿಸಿದಾಗ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕದಲೂರು ಉದಯ್ ಬೆಂಬಲಿಗರು ಕಾಂಗ್ರೇಸ್ ಪಕ್ಷದ ಪರವಾಗಿ ಮತ ಚಲಾಯಿಸಲು ಕೆಲವರಿಗೆ ತಲಾ ಒಂದು ಸಾವಿರ ಹಣ ಹಂಚಿದ್ದಾರೆ.ಆದರೆ ನಮಗೆ ಹಣ ಕೊಡದೆ ವಂಚಿಸಿದ್ದಾರೆ.ಅದಕ್ಕೆ ನಾವು ಮತ ಚಲಾಯಿಸಿಲ್ಲ.ನಮಗೂ ಹಣ ಹಂಚಿಕೆ ಮಾಡುವುದಾಗಿ ಹೇಳಿ ಸರದಿ ಸಾಲಿನಲ್ಲಿ ನಿಲ್ಲಲು ಹೇಳಿದ್ದಾರೆ.ಅದಕ್ಕೆ ಸರದಿ ಸಾಲಿನಲ್ಲಿ ನಿಂತಿರುವುದಾಗಿ ಮತದಾರರು ತಿಳಿಸಿದ್ದಾರೆ.ಈ ಸಂಧರ್ಭವನ್ನು ಮೊಬೈಲ್ ಮೂಲಕ ಚಿತ್ರೀಕರಿಸಲು ಗುರುಬಸವಯ್ಯ ಮುಂದಾದಾಗ ಉದಯ್ ಬೆಂಬಲಿಗರು ಎನ್ನಲಾದ ಕೆಲವರು.ಇದನ್ನು ಪ್ರಶ್ನಿಸಲು ವಿಡಿಯೋ ಮಾಡಲು ನೀನ್ಯಾರು ಎಂದು ಗುರುಬಸವಯ್ಯ ಮೇಲೆ ಹಲ್ಲೇಗೆ ಮುಂದಾಗಿದ್ದಾರೆ.ಆಗ ಅಲ್ಲಿಂದಲೆ ಮದ್ದೂರು ತಹಶೀಲ್ದಾರರ ಗಮನಕ್ಕೆ ಘಟನೆಯನ್ನು ತಂದ ಗುರುಬಸವಯ್ಯನವರಿಗೆ ಪೋಲಿಸ್ ಠಾಣೆಗೆ ದೂರು ನೀಡುವಂತೆ ತಹಶೀಲ್ದಾರರು ಸೂಚಿಸಿದ್ದಾರೆ.
ಮದ್ದೂರು ಟೌನ್ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ಸದ್ಯದೂರು ಸ್ವೀಕರಿಸಿರುವ ಪೋಲಿಸರು ಪ್ರಕರಣದ ಕುರಿತು ಎಫ್ ಐ ಆರ್ ದಾಖಲು ಮಾಡಿಲ್ಲ.
ಖಂಡನೆ:ಮಂಡ್ಯ ಜಿಲ್ಲೆಯ ವಿವಿಧ ಪತ್ರಿಕೆಗಳ ಸಂಪಾದಕರು ಘಟನೆಯನ್ನು ಖಂಡಿಸಿದ್ದು ಪೋಲಿಸರು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ