ಮದ್ದೂರು :- ಅಪ್ರಾಪ್ತ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು ಮದ್ದೂರು ಠಾಣಾ ಪೊಲೀಸರು ಬಂದಿಸಿದ್ದಾರೆ.
ಶಿವಪುರದ ಲಾಡ್ಜ್ ನಲ್ಲಿ ದುಷ್ಕೃತ್ಯ ಎಸಗಿದ ಮೂವರು ದೃಶ್ಯಾವಳಿಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದ ರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ,
ಅಪ್ರಾಪ್ತ ಬಾಲಕಿಯ ಪೋಷಕರು ಮದ್ದೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಪುನೀತ್, ಮಂಜುನಾಥ್ ಹಾಗೂ ಸಿದ್ದಾರ್ಥನನ್ನು ಪೊಲೀಸರು ಬಂಧಿಸಿದ್ದಾರೆ.
ಮಗಳು ದ್ವಿತೀಯ ಪಿಯುಸಿ ಓದುತ್ತಿದ್ದು, ಯುವ ದಸರಾಗೆ ಹೋಗಿದ್ದಂತ ಸಂದರ್ಭದಲ್ಲಿ ಪುನೀತ್ ಎಂಬ ಯುವಕ ಪರಿಚಯವಾಗಿ ಲವ್ ಮಾಡುತ್ತೇನೆ, ನೀನಿಲ್ಲದೇ ಬದುಕೋದಿಲ್ಲ ಎಂಬುದಾಗಿ ಪದೇ ಪದೇ ಆಕೆಯನ್ನು ಪೀಡಿಸಿರುತ್ತಾನೆ.
ಅ.4 ರಂದು ಸುಮಾರು 11 ಗಂಟೆಗೆ ಮಗಳನ್ನು ಕೆ.ಎಂ ದೊಡ್ಡಿಯಿಂದ ಮದ್ದೂರಿಗೆ ಬಸ್ ನಲ್ಲಿ ಕರೆದುಕೊಂಡು ಹೋಗಿ , ಮದ್ದೂರು ಬಸ್ ಸ್ಟಾಂಡ್ ಬೇಕರಿಯಲ್ಲಿ ಮ್ಯಾಂಗೋ ಜ್ಯೂಸ್ ಕೊಡಿಸಿದ್ದು, ಆನಂತರ ಆಕೆಯನ್ನು ಶಿವಪುರದಲ್ಲಿರುವ ನಿಖಿತ ಲಾಡ್ಜ್ ಗೆ ರಾತ್ರಿ 7 ರ ಸಮಯದಲ್ಲಿ ಕರೆದು ಹೋಗಿ ಪುನೀತ್ ಏಕಾಏಕಿ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪುನೀತ್ ಅಷ್ಟೇ ಅಲ್ಲದೇ ಆತನ ಸ್ನೇಹಿತ ಮಂಜುನಾಥ ಹಾಗೂ ಸಿದ್ದಾರ್ಥ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ
ಪುನೀತ್, ಮಂಜುನಾಥ ಹಾಗೂ ಸಿದ್ದಾರ್ಥ ಸಾಮೂಹಿಕ ಅತ್ಯಾಚಾರದ ಬಳಿಕ ದೃಶ್ಯವನ್ನು ವೀಡಿಯೋದಲ್ಲಿ ಚಿತ್ರೀಕರಿಸಿಕೊಂಡು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಹರಿಬಿಡೋದಾಗಿ ಬೆದರಿಕೆ ಹಾಕಿರುತ್ತಾರೆ. ಹೀಗಾಗಿ ನನ್ನ ಮಗಳು ಯಾರಿಗೂ ವಿಷಯವನ್ನು ಹೇಳಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ನನ್ನ ಮಗಳ ಮೊಬೈಲ್ ಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಾವಳಿಯ ವೀಡಿಯೋ ಕಳುಹಿಸಿ, ನೀನು ಕರೆದಾಗಲೆಲ್ಲ ಬರಬೇಕು. ಇಲ್ಲವಾದಲ್ಲಿ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಯೊಡ್ದಿದ್ದು,. ಜೊತೆಗೆ ನೀನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೋಷಕರ ದೂರನ್ನು ಆಧರಿಸಿ, ಮದ್ದೂರು ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿ,ವಿಚಾರಣೆ ಕೈಗೊಂಡಿದ್ದಾರೆ.