ಫಿನಾಯಿಲ್ ಕುಡಿದು ಮಹಿಳೆ ಸಾವು
ಹಲಗೂರು:ಎ.೦೩ ಫಿನಾಯಿಲ್ ಅನ್ನು
ನೀರು ಎಂದು ಗ್ರಹಿಸಿ ಕುಡಿದು ಸಮೀಪದ ಮರೀಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕತಾಯಮ್ಮ(68) ಬುಧವಾರ ಮೃತಪಟ್ಟಿದ್ದಾರೆ.
ಚಿಕ್ಕತಾಯಮ್ಮ ಅವರಿಗೆ ದೃಷ್ಟಿದೋಷದಿಂದಾಗಿ 10 ವರ್ಷಗಳಿಂದ ಕಣ್ಣು ಕಾಣಿಸುತ್ತಿರಲಿಲ್ಲ. ಏ.1ರಂದು ರಾತ್ರಿ ಮನೆಯಲ್ಲಿ ಬಾಟೆಲ್‌ನಲ್ಲಿ ಇಟ್ಟಿದ್ದ ಪಿನಾಯಿಲ್ ಅನ್ನು ನೀರು ಎಂದು ಭಾವಿಸಿ ಕುಡಿದಿದ್ದಾರೆ. ಸ್ವಲ್ಪ ಹೊತ್ತಿನ
ನಂತರ ಹೊಟ್ಟೆ ಉರಿ ಎಂದು ಕೂಗಾಡಿದ್ದಾರೆ.
ಮನೆಯವರು ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕ್ಕತಾಯಮ್ಮ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.