ಕಬ್ಬು ನುರಿಸುವ ಕೆಲಸದಲ್ಲಿ ತೊಂದರೆಯಾಗಿಲ್ಲ: ವದಂತಿಗಳಿಗೆ ಕಿವಿಕೊಡಬೇಡಿ: ಡಾ: ಹೆಚ್ ಎಲ್ ನಾಗರಾಜ್
ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕೆಲಸ ನಡೆಯುತ್ತಿದ್ದು, ರೈತರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್ ಅವರು ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆಯಿಂದ ಕೆಲವು ಗಂಟೆಗಳು ಮಾತ್ರ ಕಬ್ಬು ನುರಿಸುವ ಕೆಲಸಕ್ಕೆ ತೊಂದರೆಯಾಗಿದ್ದು, ಅದನ್ನು ಹೊರತುಪಡಿಸಿದರೆ ಕಬ್ಬು ನುರಿಸುವ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.
ಕಾರ್ಖಾನೆಯ ಸಿಬ್ಬಂದಿಗಳು ಕಬ್ಬು ನುರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಬ್ಬು ಖರೀದಿ ಕ್ಷೇತ್ರ ಅಧಿಕಾರಿಗಳು ಕಬ್ಬು ಖರೀದಿ ಕೆಲಸ ನಿರ್ವಹಿಸುತ್ತಿದ್ದು, ರೈತರು ಚಿಂತೆ ಮಾಡದೇ ಮೈಶುಗರ್ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ