ಸಹೋದರರ ಸವಾಲ್ ಅಂತ್ಯ: ಎಚ್ ಪಿ ಸ್ವರೂಪ್ ಗೆ ಹಾಸನ ಟಿಕೇಟ್
ರಾಜ್ಯದ್ಯಂತ ತೀವ್ರ ಕುತೂಹಲ ಕೆರಳಿಸಿ ಒಂದು ಹಂತಕ್ಕೆ ದಳದ ವಿಘಟನೆಗೆ ದಾರಿ ಮಾಡಿಕೊಡಬಹುದಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜ್ಯಾದಳ ಟಿಕೇಟ್ ಮಾಜಿ ಶಾಸಕ ದಿವಂಗತ ಎಚ್ ಪಿ ಪ್ರಕಾಶ್ ಪುತ್ರ ಎಚ್ ಪಿ ಪ್ರಕಾಶ್ ಗೆ ಘೋಷಣೆಯಾಗಿದೆ.ಮಾಜಿ ಸಚಿವ ಎಚ್ ಡಿ ರೇವಣ್ಣ ತಮ್ಮ ಪತ್ನಿ ಭವಾನಿ ರೇವಣ್ಣರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಭಿ ಫಾರಂ ನೀಡುವಂತೆ ಪಟ್ಟು ಹಿಡಿದಿದ್ದರು.ಹಾಲೀ ಶಾಸಕ ಬಿಜೆಪಿಯ ಪ್ರೀತಂಗೌಡ ದೇವೆಗೌಡ ಕುಟುಂಬದ ವಿರುದ್ದ ೫೦ಸಾವಿರ ಮತಗಳ ಅಂತರದಿಂದ ಆಯ್ಕೆಯಾಗುವುದಾಗಿ ಸವಾಲು ಹಾಕಿದ್ದರು. ಇದರಿಂದ ಕೆರಳಿದ್ದ ರೇವಣ್ಣ ಭಿ ಫಾರಂಗಾಗಿ ಪಟ್ಟು ಹಾಕಿದ್ದರು.ರೇವಣ್ಣ ಕುಟುಂಬ ಸ್ಪರ್ಧಿಸಿದರೆ ಪ್ರೀತಂಗೌಡ ಮಣಿಸುವುದು ಕಷ್ಟ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದರು.ಕಡೆಗೆ ಸಹೋದರರ ನಡುವೆ ರಾಜೀ ಸಂಧಾನ ನಡೆದು ಭಿ ಫಾರಂ ಸ್ವರೂಪ್ ಪಾಲಾಗಿದೆ.ಪ್ರತಿಷ್ಟಿತ ಹಾಸನ ಕ್ಷೇತ್ರದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ