ಮಂಡ್ಯ :- ಆ.೧೦.ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧದ ನಿರಂತರ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು.
ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ೩೬ನೇ ದಿನದ ಧರಣಿಯಲ್ಲಿ ಹಲವು ಸಂಘಟನೆಗಳ ಕಾರ್ಯ ಕರ್ತರು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕಾರ್ಯಕರ್ತರು ನಿರಂತರ ಧರಣಿ ಬೆಂಬಲಿಸಿದರು.
ಕಾವೇರಿ ವಿಚಾರದಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳು ಕರ್ನಾಟಕದ ಹಿತ ಕಾಪಾಡಲು ಮುಂದಾಗಬೇಕು ಅನ್ನದಾತರ ಕೂಗಿಗೆ ಸ್ಪಂದಿಸ ಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡ ರಾದ ಲಕ್ಷ್ಮಣ್, ಮಹೇಶ್, ರಮೇಶ್, ಕೆ.ಸಿ.ಮಹೇಶ್ ನೇತೃತ್ವ ವಹಿಸಿದ್ದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘ ಟನೆಯ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿ ಧರಣಿಯಲ್ಲಿ ಭಾಗಿಯಾದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಹಾಡ್ಯ ರಮೇಶ್ ರಾಜು, ಶಿವ ಕುಮಾರ್ ನೇತೃತ್ವ ವಹಿಸಿದ್ದರು.
ಕದಂಬ ಸೈನ್ಯ ಕಾರ್ಯ ಕರ್ತರು ಕಾವೇರಿ ಉದ್ಯಾನ ವನದ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ತೆರಳಿ ಹೋರಾಟ ಬೆಂಬಲಿಸಿದರು.
ಸೈನ್ಯದ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ಉಮ್ಮಡ ಹಳ್ಳಿ ನಾಗೇಶ್, ಡಾಕ್ಟರ್ ದೇವರಾಜ್, ಎಸ್ ಶಿವಕುಮಾರ್ ಇತರರಿದ್ದರು.
ಭಾರತೀಯ ಮಜ್ಜುರ್ ಸಂಘದ ( ಬಿಎಂಎಸ್ ) ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ಘಟಕದ ಕಾರ್ಮಿಕರು ಕಾವೇರಿ ಹೋರಾಟ ಬೆಂಬಲಿಸಿ ಧರಣಿಯಲ್ಲಿ ಭಾಗಿಯಾದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವ್, ಪಾಂಡವಪುರ ಘಟಕದ ಅಧ್ಯಕ್ಷ ಕುಮಾರ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ಶ್ರೀರಂಗಪಟ್ಟಣ ಘಟಕದ ಅಧ್ಯಕ್ಷ ಕೆಂಪೇಗೌಡ, ಬೆಳಗೋಳದ ಯೋಗೇಶ್ ನೇತ್ರತ್ವ ವಹಿಸಿದ್ದರು
ರಾಮನಗರ ಜಿಲ್ಲೆಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಹೋರಾಟ ಬೆಂಬಲಿಸಿದರು, ರಾಮನಗರ ಶಿವಕುಮಾರ್ ಇತರರು ಧರಣಿಯಲ್ಲಿ ಭಾಗಿಯಾಗಿದ್ದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಮುಖವಾಡ ಧರಿಸಿ ರಿಂಚು, ಕಟ್ಟರ್, ಪೈಪುಗಳನ್ನು ಹಿಡಿದು ಧರಣಿ ನಡೆಸಿ ತಮಿಳುನಾಡಿನ ವಾಟರ್ ಮ್ಯಾನ್ ಗಳಂತೆ ವರ್ತಿಸಿ ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಿಲ್ಲ ಎಂದು ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.