ಮಂಡ್ಯ : ಕೃಷ್ಣ ರಾಜಸಾಗರದ ಸುತ್ತಮುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವುದನ್ನು ತಡೆಯಬೇಕು ಎಂದು ಆರ್‌ಟಿಐ ಕಾರ್ಯಕರ್ತ ಕೆ ಆರ್ ರವೀಂದ್ರ ಒತ್ತಾಯಿಸಿದರು. ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ,ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ ನಿರಂತರವಾಗಿ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದೆ.ಆದರೂ ಸಹ ಇದನ್ನು ತಡೆಗಟ್ಟಿಲ್ಲ ಎಂದು ದೂರಿದರು. ಜಲಾಶಯಕ್ಕೆ ಧಕ್ಕೆ ಯಾಗುವ ಹಿನ್ನೆಲೆಯಲ್ಲಿ ನ್ಯಾಯಾಲಯ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಆದೇಶಿಸಿದೆ .ಆದರೂ ಕೂಡ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಟ್ರಯಲ್ ಬ್ಲಾಸ್ಟ್ ನಡೆಸಲಾಗುತ್ತಿದೆ ಎಂದು ಆಪಾದಿಸಿದರು.
ಪಾಂಡವಪುರ ತಾಲ್ಲೂಕಿನ ಹೊನಗನಹಳ್ಳಿ ,ಚಿನಕುರಳಿ ಸೇರಿದಂತೆ ವಿವಿಧಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಗ್ರಾಮ ಪಂಚಾಯಿತಿಗೆ ಯಾವ ರಾಜಧನವನ್ನು ನೀಡುತ್ತಿಲ್ಲ ಎಂದು ಆಪಾದಿಸಿದರು.
ಮಂಡ್ಯ ಜಿಲ್ಲೆಯ 2016 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ತಾವು 2017ರಲ್ಲಿ ದೂರು ನೀಡಿದ ಪರಿಣಾಮ ತನಿಖೆಗೆ ಆದೇಶಿಸಲಾಗಿದೆ. ಮತ್ತೆ 2019 ರಲ್ಲಿಯೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ .ಇದರ ಪರಿಣಾಮ ತನಿಖೆ ನಡೆಯುತ್ತಿದೆ. ನಾಲ್ಕು ಪ್ರಕರಣಗಳು ಸಿಐಡಿ ತನಿಖೆಗೆ ಒಳಪಡಿಸಲಾಗಿದೆ ಎಂದು ನುಡಿದರು .
ಟ್ರಯಲ್ ಬ್ಲಾಸ್ಟ್ ನಡೆಸುವುದರಿಂದ ಜಲಾಶಯಕ್ಕೆ ಧಕ್ಕೆ ಆಗುತ್ತದೆ .ಈಗಾಗಲೇ ಈ ಬಗ್ಗೆ ವರದಿಗಳು ಬಂದಿದೆ .ಆದ್ದರಿಂದ ಯಾವುದೇ ಕಾರಣಕ್ಕೂ ಕೆ ಆರ್ ಎಸ್ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ನಡೆಸಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ,ಅಲ್ಲದೆ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು .
ಗೋಷ್ಠಿಯಲ್ಲಿ ಪ್ರೊಫೆಸರ್ ಹುಲ್ಕೆರೆ ಮಹಾದೇವು, ಕೃಷ್ಣ ,ಸುರೇಂದ್ರ, ಶಿವರಾಮು ,ಜಯರಾಮ ಉಪಸ್ಥಿತರಿದ್ದರು.