ಮಂಡ್ಯ: ತನ್ನ ಜಮೀನು ಪರಿಹಾರ ಸಂಬಂದ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಝಾವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೃಷ್ಣರಾಜ ಪೇಟೆ ತಾಲೂಕು ಆಡಳಿತ ಸ್ವಾಧೀನವಾಗಿದ್ದ ತಮ್ಮ ಭೂಮಿಗೆ ಪರ್ಯಾಯ ಭೂಮಿ ಕೊಡಲಿಲ್ಲ.ಉಳುಮೆ ಮಾಡುತ್ತಿದ್ದ ಸರಕಾರಿ ಭೂಮಿಯ ಖಾತೆಯನ್ನು ಮಾಡಿಕೊಡಲಿಲ್ಲ ಎಂದು ಮೃತ ರೈತ ನಿನ್ನೆ ಜಿಲ್ಲಾಧಿಕಾರಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.


