Wednesday, September 16, 2026
spot_img

ಇ ಖಾತೆಗೆ ಲಂಚ ಪಡೆದ ಆರ್ ಐ ಸಸ್ಪೆಂಡ್ ಮಾಡಿದ ಪಾಲಿಕೆ ಆಯುಕ್ತೆ

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ..!

ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನಲೆ ವಲಯ ಕಚೇರಿ 2 ರ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿಎಂ ಮಂಜುನಾಥ್ ಅಮಾನತಾಗಿದ್ದಾರೆ.ಗೂಗಲ್ ಪೇ ಮೂಲಕ ಹಣ ಪಡೆದಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ ಹೊರಡಿಸಿದ್ದಾರೆ.ವಾರ್ಡ್ ನಂ 62 ರ ನಿವಾಸಿ ಪವಿತ್ರ ಎಂಬುವರು ಇ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.ಎರಡು ತಿಂಗಳಾದರೂ ಇ ಖಾತೆ ಮಾಡಿಕೊಡದೆ ಮಂಜುನಾಥ್ ಸತಾಯಿಸಿದ್ದರು.ಪವಿತ್ರ ರವರ ಪರವಾಗಿ ವಕೀಲರಾದ ಲೋಕೇಶ್ ರವರು ಖಾತೆ ಮಾಡಿಕೊಡುವಂತೆ ಮನವಿ ಮಾಡಿದಾಗ ಮಂಜುನಾಥ್ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಮುಂಗಡವಾಗಿ ಗೂಗಲ್ ಪೇ ಮೂಲಕ 50 ಸಾವಿರ ಪಾವತಿಸಲಾಗಿತ್ತು.ಉಳಿದ 50 ಸಾವಿರಕ್ಕೆ ಒತ್ತಾಯಿಸಿದ ಹಿನ್ನಲೆ ಲೋಕೇಶ್ ದಾಖಲೆ ಸಮೇತ ದೂರು ಸಲ್ಲಿಸಿದ್ದರು.ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಮಂಜುನಾಥ್ ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!