ಇನ್ಮುಂದೆ ಹೊರಗುತ್ತಿಗೆ ನೌಕರರಿಗೆ ನಗದುರಹಿತ ಚಿಕಿತ್ಸೆ :ಸಿಎಂ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ರೂ ೫ ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುವ ನೌಕರರ ಹಿತಾಸಕ್ತಿ ಕಾಯುವುದಾಗಿ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಸದ್ಯ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.ರಾಜ್ಯ ಸರ್ಕಾರಿ ನೌಕರರು ನಗದು ರಹಿತ ಚಿಕಿತ್ಸೆಯ ಆರೋಗ್ಯ ಸಂಜೀವಿನಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದರು.
ಈವರೆಗೆ ಚಿಕಿತ್ಸೆ ವೆಚ್ಚದ ನಂತರ ಸರ್ಕಾರಕ್ಕೆ ಖರ್ಚುವೆಚ್ಚ ಸಲ್ಲಿಸಿ ನಂತರ ಖರ್ಚಾದ ಹಣವನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ಸರ್ಕಾರಿ ನೌಕರರು ಮರುಪಾವತಿ ಮಾಡಿಕೊಳ್ಳುತ್ತಿದ್ದರು.
ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ಇಎಸ್ ಐ ಸೌಲಭ್ಯ ಇದ್ದರೂ ಅದು ಕೆಲವೇ ಆಸ್ಪತ್ರೆಗಳಿಗೆ ಸಿಮೀತವಾಗಿ ಇಎಸ್ ಐ ಚಿಕಿತ್ಸೆ ಎಲ್ಲರಿಗೂ ಸಿಗುತ್ತಿರಲಿಲ್ಲ.
ಈಗ ಸರಕಾರ ಘೋಷಿಸಿರುವ ನಗದುರಹಿತ ಚಿಕಿತ್ಸೆ ಯೋಜನೆಗೆ ಖಾಸಗಿ ಆಸ್ಪತ್ರೆಗಳು ಸಮ್ಮತಿ ಸೂಚಿಸುವ ಸಾಧ್ಯತೆ ಕಡಿಮೆ ಇದೆ.ಹೆಸರಿಗೆ ನಗದುರಹಿತ ಎಂದರು ರೋಗಗಳ ಪರೀಕ್ಷೆ ಔಷಧಗಳ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುವುದು ಸಹಜವಾಗಿದೆ.
ಒಟ್ಟಿನಲ್ಲಿ ನೂತನ ಘೋಷಣೆಯ ಮಾರ್ಗದರ್ಶಿ ಸೂತ್ರಗಳು ಹೊರಬಿದ್ದ ಮೇಲಷ್ಟೆ ಯೋಜನೆಯ ಉಪಯುಕ್ತತೆ ಎಷ್ಟು ಎಂಬುದು ತಿಳಿಯಲಿದೆ.